TIGHT BINGING BOOK

UNEVEN PAGES

UNIVERSAL LIBRARY WN

OU 19861

AdVddl | IVSHAINN

"ಅಲ ne ಉಲ್ಕ Wo US

“ಭಾರತದ ನೀರ ರಮಜಿಯರು

ನಾಡಿಗ: ಕೃಷ್ನ ಮೂರ್ತಿ_ ೪೪ (ಸಂಪಾದಕರು)

EAL

ಗೀತಾ ಸಾಹಿತ್ಯ ಮಂದಿರ

೨೬೨೪, ವಿ. ವಿ. ಮೊಹಲ್ಲ ಮೈಸೂರು.

ಪ್ರಥಮ ಮುದ್ರಣ ೧೯೪೬ ದ್ವಿತೀಯ ಮುದ್ರಣ ೧೯೫೧ ತೃತೀಯ ಮುದ್ರಣ ೧೯೫೭

ಎಲ್ಲಾ ಹಕ್ಳುಗಳೂ ಗ್ರಂಥಕರ್ತರಿಂದ ಕಾದಿರಿಸಲಾಗಿದೆ.

ಬೆಳೆ: ಒಂದೂಕಾಲು ರೊಪಾಯಿ.

ಮುಪ್ರಕರು

ವಾಲ್ಮೀಕಿ ಮುದ್ರಣಾಲಯ ಮೈಸೂರು

ಮುನ್ನುಡಿ

ಪುಸ್ತಕವು ನಾಲ್ವರು ವೀರ ರಮಣಿಯರ ಸೂರ್ತಿದಾಯಕವಾದೆ ಜೀವನ ಚಿತ್ರಗಳನ್ನು ವಾಚಕರ ಮುಂದಿಟ್ಟು ಅವರೆ ಮನಸ್ಸನ್ನು ಕುಣಿಸಿ ತಣಿಸುತ್ತದೆ. ಇದಕ್ಕೆ ಮುನ್ನುಡಿಯನ್ನು ಬರೆಯುವುದು ನನಗೆ ಬಹಳ ಸಂತೋಷಕರವಾಗಿದೆ.

ಪುಸ್ತಕದಲ್ಲಿ "ಕಮಲಾ ನೆಹರು', "ಸರೋಜಿನಿ ನಾಯ್ಡು', "ಕಸ್ತೂರಿ ಬಾ' ಮತ್ತು "ವಿಜಯಲಕ್ಷ್ಮಿ ಸಂಡಿತ್‌- ಎಂಬ ಅಭಿದಾನಗಳಲ್ಲಿ ನಾಲ ಖು ಜೀವನ ಚಿತ್ರ 5 ಗಳಿವೆ. ದೇಶಾಭಿಮಾನವೇ ದೇಹಗಳನ್ನು ಧರಿಸಿ. ಬಂದಂತಿದ್ದ ನಾಲ್ಗು «4 ನೀರೆ ರಮಣಿ `ಯರ ತ್ಯಾಗಮಯವಾದ ಜೀವನದ ಹಲವು ಸನ್ಸಿವೇಶಗಳನ್ನು ಗ್ರಂಥಕರ್ತರು ಹೃದಯಂಗಮವಾಗಿ ವರ್ಣಿಸಿದ್ದಾರೆ. ಗ್ರಂಥಕರ್ತರಾದ ಶ್ರೀರ್ಮಾ ನಾಡಿಗ ಕೃಷ್ಣಮೂರ್ತಿ ಯವರು ಕನ್ನಡಿಗರಿಗೆ ಮೊದಲೇ ತಮ್ಮ ಗ್ರಂಥಗಳ ಮೂಲಕ ಚಿರಪರಿಚಿತ ರಾಗಿದ್ದಾರೆ; ಅರಿತನುರಿತ ಲೇಖಕಕೆಂದು” Re ಗಳಿಸಿದ್ದಾ ರೆ. 4 ಾರತದ ವೀರ ರಮಣಿಯರು ಎಂಬ ಪುಸ್ತ ಕವನ್ನೂ ಅವರು ಮನ ಮುಟ್ಟುವಂತೆ ಸರಳವಾದ ತಿಳಿಗನ್ನಡ ಶೈಲಿಯಲ್ಲಿ ಸ್ವಾರಸ್ಯ ವಾಗಿ ಬರೆದಿದ್ದಾರೆ. ಪುಸ್ತಕವನ್ನು ಒಮ್ಮೆ ಓದಲು ಪ್ರಾರಂಭಿಸಿದರೆ ಅದನ್ನು ಪೂಕೈಸುವವರೆಗೂ ಕೆಳಗಿಡಲು ಮನಸ್ಸೇ ಬರುವುದಿಲ್ಲ; "ನನಗೆ ಬಾ ದರ್ಶನ್‌” ಎಂಬ ಭಾಗವನ್ನಂತೂ ಒಂದು ಸಾರಿ ಓದಿದರೆ ತೃಪ್ತಿಯೇ ಆಗುವುದಿಲ್ಲ. ಗ್ರಂಥವನ್ನು ಬರೆದು ಶ್ರೀರ್ಮಾ ನಾಡಿಗ ಕೃಷ್ಣ ಮೂರ್ತಿಯವರು ಕನ್ನ ಜಗರಿಗೆ ಸೊಡ್ಡ ಉಪಕಾರವನ್ನು ಮಾಡಿದ್ದಾರೆ. ವಿಜಯಲಕ್ಷ್ಮಿ ಸಂಡಿತರ ಜೀವನ ಚರಿತೆ ತ್ರಯನ್ನು ಸರಳವಾದ ಲ್‌ಿ ಶ್ರೀಮತಿ ನಾಡಿಗ್‌ರವರು ಹೃದಯಂಗಮಯವಾಗಿ ಚಿತ್ರಿಸಿದ್ದಾರೆ. ಪುಸ ಸ್ಪಕಕ್ಕೆ ಇದೂ ಒಂದು ಅನರ್ಫ್ಯ ರತ್ನವನ್ನು ಸೇರಿಸಿ ಪುಸ್ತಕದ ಬೆಲೆಯನ್ನು ಹೆಚ್ಚಿ ಸಿದೆ. ಇವರಿಬ್ಬ ರಸ ಸಾಹಿತ್ಯ ಸೇವೆಯು ಚಿರಕಾಲ ನಡೆದು ಕನ್ನಡಿಗರಿಗೆ EE ತೆ” ಭಗವಂತನು ಅನುಗ್ರಹಿಸಲೆಂದು ನಾನು ಮನಃ ಪೂರ್ವಕವಾಗಿ ಹಾರೈಸುತ್ತೇನೆ.

ಸಿ, ತೆ. ವೆಂಕಟರಾಮಯ್ಯ.

ಭಿ

ನಿಷಯ ಸೂಚಿಕೆ

ಕಮಲಾ ನೆಹರು ಸರೋಜಿನಿ ನಾಯ್ಡು ಕಸ್ತೂರಿ ಬಾ

ನಿಜಯಲಕ್ಷ್ಮಿ ಪಂಡಿತ್‌

೪೫.

೬೯

ಹಮಲಾನೆಹರು

ಯಾರೀಕೆ?

ಆನಂದ ಭವನದ ವಿಶಾಲವಾದ ಕೋಣೆಯೊಂದರಲ್ಲಿ ಆಕೆ ಮಂಚದ ಮೇಲೆ ಮಲಗಿದ್ದಾಳೆ. ಅಸಹಕಾರ ಚಳುವಳಿ, ಕರನಿರಾಕರಣ ಸತ್ಯಾ ಗ್ರಹೆ ಬಿಹಾರ ಭೂಕಂಪದ ಪರಿಹಾರದ ಕೆಲಸ-ಇವುಗಳ ಪರಿಣಾಮ ವಾಗಿ ಮೊದಲೇ ಕೃಶವಾಗಿದ್ದ ದೇಹ ಈಗ ತೀರಾ ಕೆಟ್ಟು ಹೋಗಿದೆ. ಮಗಳಂತೆ ಪ್ರೀತಿಸುತ್ತಿದ್ದ ಮಾವನವರು ತೀರಿಕೊಂಡ ದು:ಖವೊಂದುಕಡೆ. ಸತತವೂ ಸೆರೆಮನೆಯೇ ಆವಾಸವಾಗಿ, ಗಂಡ ಅತಿ ಅವಶ್ಯಕವಾಗಿ ಹತ್ತಿರ ದಲ್ಲಿರಬೇಕಾದಾಗ, ಆತ ಇರಲು ಸಾಧ್ಯವಿಲ್ಲದುದರ ನೋವು ಒಂದುಕಡೆ. ಇದೆಲ್ಲಕ್ಕಿಂತ ಮೇಲಾಗಿ, ದೇಶದ ಸೇವೆಯಲ್ಲಿ ತನ್ನ ಪಾತ್ರವಹಿಸಲು ಅಸ ಹಾಯಳಾಗಿ, ರೋಗದಿಂದ ನರಳುತ್ತಿದ್ದು, ದೇಶದ ಸ್ಟಾತಂತ್ರ್ಯ್ಯಕ್ಟಾಗಿ ಕೊರಗುತ್ತಿದ್ದ ಹಂಬಲ.

ಸರ್ಕಾರ ಸೆರೆಮನೆಯಲ್ಲಿದ್ದ ಗಂಡನಿಗೆ ಖಾಯಿಲೆಯಿಂದ ಮಲಗಿದ್ದ ಆತನ ಹೆಂಡತಿಯನ್ನು ಸಂದರ್ಶಿಸಲು ಅಪ್ಪಣೆ ಕೊಟ್ಟದೆ. ಆತ ನೈನಿ ಸೆರೆಮನೆಯಿಂದ ಧಾವಿಸಿ, ತನ್ನ ಹೆಂಡತಿಯ ಪಕ್ಕದಲ್ಲಿ ಕುಳಿತು ಸಂತ್ಸೆಸು ತ್ತಿದ್ದಾಗ ಕ್ಷಣಕಾಲ ಮೌನ. ಇಬ್ಬರೂ ಥ್ಸೈರ್ಯದಿಂದ ಮುಗುಳುನಗೆ ನಗುತ್ತಾರೆ. ಇಬ್ಬರಿಗೂ ಸಿಂಹ ಬಲ ಬಂದಂತೆ ಭಾಸವಾಗುತ್ತದೆ. ಗಂಡ ಹೆಂಡಿರ ಹೃದಯ ಒಂದಾಗುತ್ತದೆ; ಗಂಡನಿಗಿಂತ ಹೆಚ್ಚಾಗಿ ಹೆಂಡತಿ,

ವಿ

ಆಕೆಗಿಂತ ಹೆಚ್ಚಾಗಿ ಗಂಡ ಒಬ್ಬರನ್ನೊಬ್ಬರು ಅರಿತುಕೊಳ್ಳುತ್ತಾರೆ. ಆನಂದಭವನವೆಲ್ಲ ಆನಂದದಿಂದ ತುಳುಕಾಡುತ್ತದೆ. ಹೆಂಡತಿಯನ್ನು ನೋಡಲು ಮೀಸಲಾಗಿ ಕೊಟ್ಟಿದ್ದ ಕಾಲ ಸವೆಯುತ್ತ ಬರುತ್ತದೆ. ಸರಿ ಇನ್ನು ಹೊರಡಬೇಕು ನ್ಫೆ ನಿ ಸೆರೆಮನೆಗೆ. ಅಗಲಿಕೆ. ಅನುಭವಿಸಿದವರಿಗೇ ಗೊತ್ತು. ಎಂತಹೆ ಹೃದಯವಿದ್ರಾ ವಕವಾದ ೃಶ್ಯೈವದು. ಆದರೂ ಅಲ್ಲಿ ಒಂದು ಆತ್ಮೀಯತೆ, ಗಾಂಭೀರ್ಯ, ಮಮತೆ, ಇಡ. ಜೊತಿಗೆ ಅಗಲಿಕೆಯ ನೋವೂ ಇಡೆ. ಮತ್ತೊಂದುಸಲ ಗಂಡ ಹೆಂಡತಿಯನ್ನು ಮನಸಾರೆ ನೋಡುತ್ತಾರೆ. ಹೆಂಡತಿ. ಮುಗುಳುನಗೆ ನಗುತ್ತಾಳೆ. ನಗೆಯಲ್ಲಿ ಗಂಡನಿಗೆಥ್ಸ ರ್ಯ--ಹುಮ್ಮಸ್ಸು ಕೊಡುವ, ನೊಂದ ಮನಸ್ಸನ್ನು ಸಂತೈಸುವ, oN ಯಿದೆ. ಆಕೆಗೆ ತುಂಬಾ ಸ್ವರಬಂದು ಮಾತನಾಡಲು ಶಕ್ತಿಯಿಲ್ಲದಿದ್ದರೂ ಗಂಡನ ಬರುನಿನಿಂದ ಬಲ ಪಡೆದಿದ್ದಾ ಳೆ, ಆತ ಇನ್ನೇನು ಆಕೆಯ ಕೊಠಡಿಯಿಂದ ಹೊರಡಬೇಕು ಅಷ್ಟ ರಲ್ಲಿ “ಸನ್ನೆ ಚಿ ಆತನನ್ನು ಕರೆದು ನಗುತ್ತಾ ಭೃರ್ಯದಿಂದ ಹೇಳುತ್ತಾಳೆ.

Ke ಸರ್ಕಾರಕ್ಕೆ ಕ್ರ; ಕಮಾಪಣೆ ಕೊಡುತ್ತೀರಂತೆ ಹೌದೇನು? ಹಾಗೆ ಮಾಡಬೇಡಿ! ಎಂದು.

ಯಾರೀಕೆ ?

ಬಾಲ್ಯ ಜೀವನ

ಜೈ ಪುರದ ಆಚಾರಶೀಲ ಮನೆತನದ ಕಾಶ್ಮೀರಿ ಬ್ರಾಹ್ಟ್‌ ಸ್ಪೃಣವಂಶಕ್ಕೆ ಸೇರಿದವರು ಶ್ರೀ ಜೈಕಿರ್ಶ ಅತಲ್‌ರವರು. ನಾಪಾಶೋಧ್ಯಮದಲ್ಲಿ ಚತು ರರು. ದೆಹಲಿಯಲ್ಲಿ ತಮ್ಮ ವ್ಯಾಪಾರವನ್ನು ಪ್ರಾರಂಭಮಾಡಿದರು. ಕೆಲವು ದಿನಗಳಲ್ಲಿಯೇ ದೆಹಲಿಯ ವ್ಯಾಪಾರೀವರ್ಗದಲ್ಲಿ ಶ್ರೀ ಜೈಕಿಶನ್‌ರ ಹೆಸರು

ಡಿ

ಪ್ರಭಾವ ಬೀರಿತ್ತು. ದೆಹಲಿಯ ವ್ಯಾಪಾರಸ್ತರು, ಭು ಸನ್‌ರಿಗೆ ಶ್ರೇಷ್ಠ ಪದವಿಯನ್ನು ಕೊಟ್ಟು ಹಿರಿಯರಂತೆ ಅವರನ್ನು ಸನ್ಮಾನಿಸುತ್ತಿದ್ದರು. ಸಣ್ಣ ಸಣ್ಣ ವ್ಯಾಪಾರಿಗಳು ತಮ್ಮ ಕುಂದುಕೊರತೆಗಳನ್ನು ಹೇಳಿಕೊಳ್ಳು ವುದು, ಸಹಾಯಪಡೆಯುವುದು ಮುಂತಾದ ಕೆಲಸಗಳನ್ನು ಶ್ರೀ ಜೈಕಿರ್ಶ ರವರಿಂದ ಮಾಡಿಸಿಕೊಳ್ಳುತ್ತಿದ್ದರು. ಜೈಕಿಶನ್ನರ ಅಂಗಡಿಯಲ್ಲಿ " ಇಂಥ | ಸಾಮಾನು ಸಿಕ್ಕಲಿಲ್ಲ ` ಎಂಬ ಮಾತು ಬರುತ್ತಿರಲಿಲ್ಲ. ಅವರಲ್ಲಿ ಮನುಷ್ಯ ಜೀವಿಗೆ ಸಾಮಾನ್ಯವಾಗಿ ಬೇಕಾಗುವ ಎಲ್ಲಾ ಸಾಮಾನುಗಳು ಸಿಕ್ಳುತ್ತಿ ದ್ದವು. ಜೈಕಿಶನ್ನರು ತುಂಬಾ ಉದಾರಿಗಳು, ಹಾಗೂ ಕರುಣಾಶಾಲಿಗಳು. ಇವರು ಜವಹರ್‌ ಲಾಲ್‌ ಕೌಲರ್‌_ಎಂಬುವರನ್ನು ದತ್ತು ತೆಗೆದುಕೊಂಡರು.

೧೯೦೦ ರಲ್ಲಿ ಜವಹರಲಾಲ್‌ ಕೌಲರರಗೆ ಒಬ್ಬ ಳೇ ಮಗಳು ಜನ್ಮ ವೆತ್ತಿದರು. ಆಕೆಯೇ ಕಮಲ.” ಕೆಲವು ದಿನಗಳ ಸೋಲೆ ಕೈಲಾಸ ಸನಾಫ Peg ಒಬ್ಬ ಮಗ ಜನಿಸಿದರು.

ಆಗಿನ ಕಾಲದಲ್ಲಿ ಸ್ತ್ರೀ ವಿದ್ಯಾಭ್ಯಾಸ ಅಷ್ಟು ಮುಂದುವರಿದಿರಲಿಲ್ಲ. ಅದರಲ್ಲೂ ದೆಹಲಿ ಪ್ರಾಂತ್ಯದಲ್ಲಿ ಮೊಗಲ್‌ಸಾಮ್ರಾಟರ ಕಂದಾಚಾರ ಸದ್ದಿ ಅಳಿಸಿರಲಿಲ್ಲ. ಸ್ತ್ರೀಯರು ಹೊರಗೆ ಓಡಾಡುವುದೇ ಗಾಂಭೀರ್ಯಕ್ಕೆ ಕುಂದಾ ಗಿತ್ತು. ಹಾಗೆ ಬಂದರೂ ಬುರುಕಿ ಹಾಕಿಕೊಂಡು ಬರುತ್ತಿದ್ದರು. ಕುಟುಂಬ ದಲ್ಲಿ ಮಾತ್ರ ಸ್ವಾತಂತ್ರ್ಯವಿತ್ತು. ಹಿನ್ನೆಲೆಯಲ್ಲಿ ಕಮಲ ಬೆಳೆದರು. ಆಕೆಯ ಶಿಕ್ಷಣ ಮನೆಯಲ್ಲಿಯೇ ಆಗಬೇಕಾಯಿತು. ಸ್ತ್ರೀಯರಿಗೆ ಹೆಚ್ಚಾಗಿ ಅರಬ್ಬೀ ಮತ್ತು ಪಾರ್ಸಿ ಭಾಷೆ ಹೇಳಿಕೊಡಲಾಗುತ್ತಿತ್ತು. ಕಮಲ ಇವು ಗಳ ಜೊತೆಗೆ ಹಿಂದಿಯನ್ನೂ ಕಲಿತರು.

ಕಮಲರವರಿಗೆ ಏಳುವರ್ಷ ತುಂಬಿದಾಗ, ಹತ್ತಿರದ ಸಂಬಂಧಿಯೊಡ ಗೂಡಿ ಸ್ರಯಾಗಕ್ಕೆ ಪ್ರ ಪ್ರಯಾಣ ಬೆಳೆಸಿದರು. ಅಲಹಾಬಾದಿನ ಸುಪ್ರ ಸಿದ್ಧ ಪತ್ರಿಕೆ “ಲೀಡರ್‌” ಸರಕಾ ಶ್ರೀ ಚಿಂತಾಮುಣಿಯವರಿದ್ದ ತೆ ಯಲ್ಲ ಅವರು ವಾಸಿಸುತ್ತಿದ್ದರು. ಪ್ರ ಪ್ರಯಾಗದಲ್ಲಿಯೂ ಕೂಡ ಶಿಕ್ಷಣ ಮನೆ ಯಲ್ಲಿಯೇ ಆಯಿತು.

ಕೆಶನ್ನರು ಸುಪ್ರ ಪ್ರಸಿದ್ಧ ವ್ಯಾಪಾರಿಗಳು ಆಗರ್ಭ ಶ್ರೀಮಂತರು. ಶ್ರೀ ನೋತಿಲಾಲರು ಶ್ರೇಷ್ಠ ತರಗತಿಯ ನ್ಯಾಯವಾದಿಗಳು. ಅವರ ಸಿರಿ ತನಕ್ಕೂ ಕಡಿಮೆಯಿರಲಿಲ್ಲ. ಣಿ ಕಿಶನ್ನರು, ಕೌಲರು, ಮೋತಿಲಾಲರ ಗೆಳೆಯ ರಾದರು. ಗೆಳೆತನ ಅವರನ್ನು ಹತ್ತಿರಕ್ಕೆ ತಂದಿತು. ಅವರ ಗೆಳೆತನ ಬೆಳೆ ಯಿತು. ಅವರಂತೆಯೇ ಕಮಲ, ಜವಹರರ ಗೆಳೆತನವೂ ಬೆಳೆಯಿತು. ಪ್ರಯಾಗದಲ್ಲಿ ಕಮಲರವರ ಮನೆಗೆ ಜವಹರರು ಆಗಾಗ ಬಂದು ಹೋಗು ತ್ತಿದ್ದರು. ಕಿಶನ್ನರು, ಕೌಲರು, ಹಾಗೂ ಮೋತಿಲಾಲರು, ತಮ್ಮ ಗೆಳೆತನವೇಕೆ ಬಾಂಧವ್ಯದಲ್ಲಿ ಒಂದುಗೂಡಬಾರದೆಂದು ಯೋಚಿಸುತ್ತಿದ್ದರು.

ಬೇಸಿಗೆಯಲ್ಲಿ ವಿಶ್ರಾಂತಿಗಾಗಿ ಜೆ ಕಿಶನ್ನರು ತಮ್ಮ ಪರಿವಾರದೊಂದಿಗೆ ಮಸ್ಸೂರಿ ತೋಟಗಳ, ತಂಪಾದ ನೆರಳಿನಲ್ಲಿ ಕಾಲಕಳೆಯಲು ಹೊರಟರು. ಕಮಲ ಜೊತೆಗಿದ್ದ ರು. ಇತ್ತ ಮೋತಿಲಾಲರು ಜವಹೆರರೊಂದಿಗೆ ಅಲ್ಲಿಗೆ ಬಂದಿದ್ದರು. ಅಲ್ಲೇ ಜವಹರರು ಕಮಲರನ್ನು ಚೆನ್ನಾಗಿ ತಿಳಿಯಲು ಅವ ಕಾಶ ಸಿಕ್ಕಿದ್ದು; ಹೃ ದಯಗಳು ಮಿಲನವಾದುವು. 'ಜೈಕಿತನ್ನ ಮತ್ತು ಮೋತೀಲಾಲರ ಸಮಸ್ಯೆ ಬಗೆಹರಿಯಿತು. ಮದುವೆ ನಿಶ್ಚಯವಾಯಿತು.

ನಏಿನಾಹ

ಕಮಲ-ಜವಹರರ ಪರಿಚಯವಾದ ಎರಡು ವರ್ಷಗಳನಂತರ ಅವರ ಮದುವೆ ವಿಜೃಂಭಣೆಯಿಂದ ನೆರವೇರಿತು. ಮೊದಲನೆಯ ಮಹಾ ಯುದ್ಧ ಪ್ರಾರಂಭವಾಗಿ ಎರಡು ವರ್ಷಗಳಾಗಿತ್ತು. ಮೋತಿಲಾಲರ ಒಬ್ಬರೇ ಮಗ್ಗ ಜವಹರಲಾಲರ ಮದುವೆಯ ಸಮಾರಂಭವು ವಿಶೇಷ ಸಂಭ್ರಮದಿಂದ ನಡೆಯುವುದಿತ್ತು. ಮದುವೆಗಾಗಿ ಸಿದ್ಧತೆಗಳು ತಿಂಗಳು ಗಟ್ಟಲೆ ನಡೆದವು. ಆನಂದಭವನದ ತುಂಬಾ ಪ್ರತಿದಿನವೂ ಚಿನಿವಾಲರು

ವರ್ತಕರು, ಬಟ್ಟಿ ಹೊಲಿಯುವವರು, ಬಂದು ಹೋಗುತ್ತಿದ್ದರು.

ನೂರಾರು ಗುಮಾಸ್ತರು ಮದುವೆಯ ನಾನಾ ಸಿದ್ಧತೆಗಳಲ್ಲಿ ಮಗ್ನರಾಗಿ ಗಜಿಬಿಜಿಯಿಂದ ಒಡಾಡುತ್ತಿದ್ದರು. ವಸಂತ ಪಂಚಮಿಯ ದಿನ್ನ ಕಮಲ ಜವಹರರನ್ನು ಮದುವೆಯಾದರು.

ಹೆಣ್ಣಿನ ಮನೆಯಲ್ಲಿ ಮದುವೆ ಆಗಬೇಕು. ಕಮಲರವರ ತವರು ಮನೆ ದೆಹಲಿ. ಆದ್ದರಿಂದ ಮದುವೆ ಅಲ್ಲಿಯೇ ಆಗಬೇಕಾಗಿತ್ತು. ಮದು ನೆಯ ದಿನಕ್ಕೆ, ಒಂದು ವಾರಕ್ಕೆ ಮುಂಚಿತವಾಗಿಯೇ ಅಲಹಾಬಾದಿನಿಂದ ಬೀಗರು ಶುಭಮುಹೂರ್ತದಲ್ಲಿ ಹೊರಟು ದೆಹಲಿಗೆ ಬಂದರು. ಮೋತೀ ಲಾಲರ ಸಂಗಡ ನೂರಾರು ಅಥಿತಿಗಳನ್ನು ಕರೆದುಕೊಂಡು ಬಂದಿದ್ದರು. ಮದುವೆಯ ಮಂಡಲಿಗಾಗಿ, ಅಲಂಕೃತವಾದ ಒಂದು ನಿ ಥೆ ರಾಡಿಯೇ ಏರ್ಪಾಡಾಗಿತ್ತು. ಇನ್ನೂ ನೂರಾರು ಅಥಿತಿಗಳು ಭಾರತದ ನಾನಾ ಮೂಲೆಗಳಿಂದ ಬಂದ್ಳು ದೆಹಲಿಯಲ್ಲಿ ಸೇರಿದರು. ಅತಿಥಿಗಳ ಬಿಡಾರಕ್ಕೆ ಮನೆಗಳು ಸಾಲದೆ ಬಿದ್ದು ದರಿಂದ ನೂರಾರು ಗುಡಾರ” (ಡೇರೆ)ಗಳನ್ನು ಕಟ್ಟ ಬೇಕಾಯಿತು. ಒಂದುವಾರದಲ್ಲಿ _ ದೆಹಲಿಯಲ್ಲಿ ಒಂದು ಚಿಕ್ಕ ನಸಾಹತೇ ನಿರ್ಮಾಣವಾಯಿತು. ಅದಕ್ಕೆ ನೆಹರು ಮದು

ನೆಯ ಬಿಡಾರ ಎಂದು ಹೆಸರಿಡಲಾಯಿತು.

ಮದುವೆ ೧೦ ದಿನಗಳ ವರೆಗೆ ಬಹಳ ವಿಜೃಂಭಣೆಯಿಂದ ನಡೆಯಿತು. ಅನಂತರ ಸೌಂದರ್ಯವತಿಯಾದ ಸೌಭಾಗ್ಯವತಿಯನ್ನು ಕರೆದುಕೊಂಡು ಜವ ಹರಲಾಲರು ಆಲಹಾಬಾದಿಗೆ ತೆರಳಿದರು. ೨೧ ತಿಂಗಳ ನಂತರ ೧೯೨೭ರಲ್ಲಿ ನಟ್ಟ ಸತಿಯು, ಕುಸುಮ ಇದಾ ಸರತ ಯತುಟ್ಟಿನಡು ಬಂದೆ `ತತಥಿಗಳಿಗೆ ಸುಂದರಳಾದ ಕಮಲಳ ಕಡೆ ಹೆಮ್ಮೆಯಿಂದ ಕೈತೋರಿಸಿ "ಇವಳೇ ನಮ್ಮ ಸಾಸೆ' ಎಂದು ತೋರಿಸುತ್ತಿದ್ದ ಮೋತೀಲಾಲರ ಆನಂದಕ್ಕೆ ಪಾರವೇ ಇಲ್ಲವಾಯಿತು.

ಜವಹರ. ಕಮಲರ ದಾಂಪತ್ಯ ಜೀವನ ಮೊದಲಿನಲ್ಲಿ ಸುಖಮಯ ವಾಗಿ ಪ್ರಾರಂಭವಾಯಿತು. ವಿನಯವತಿಯಾಗಿ, ಕಮಲ ಎಲ್ಲರಿಂದಲೂ

"ಬೇಕೆ'ನ್ನಿಸಿಕೊಂಡು ಮನೆಗೆಲಸನ ನಿರ್ನಹೆಸೆಯುಲ್ಲಿ ನೈಪುಣ್ಯತೆ ಸನ್ನು ಪಡೆದಳು. ನವೀನ ರೀತಿಯ ನಿವ್ಯಾಭ್ಯಾಸ ಅಕೆಗಾಗಿರಲ್ಲ್ಲಿ ಹಾಗೆುದು ಜ್ಞಾನಸಂಪಾದನೆಯಲ್ಲಿ ಎಂದೂ ಹಿಂದೆ ಬೀಳುತ್ತಿರಲಿಲ್ಲ. ಕಣ್ಣಿಗೆ ಕಂಡು ಕಿವಿಗೆ ಕೇಳಿಸಿದ ಅನೇಕ ವಿಷಯಗಳನ್ನು ತಿಳಿದುತೊಳ್ಳು ವುದರಲ್ಲಿ ಆಸಕ್ತಿ ತೋರಿಸುತ್ತಿದ್ದರು. ಮನೆಯ ಮುದ್ದು ಮಗಳಾದರೂ ಆಕೆಗೆ ಜಂಭ ಸ್ವಲ್ಪವೂ ಇರಲಿಲ್ಲ... ಅದಕ್ಕೆ ಬದಲಾಗಿ ಯಾವಾಗಲೂ ಆನಂದದಿಂದ ಮೃದುತೆಯಂದ ನಡೆದುಕೊಳ್ಳು ತ್ತಿದ್ದರು.

ಮದುವೆಯ ಕಾಲಕ್ಕೆ ಭಿ ತುಂಬಾ ನಾಚಿಕೆಯ ಸ್ವಭಾವದವಳಾಗಿ ಯಾರ ಹತ್ತಿ ರದಲ್ಲೂ ಸೇರುತ್ತಿರಲಿಲ್ಲ. ಈಗಿನ ಕಾಲದ ಹುಡುಗಿಯರಲ್ಲಿ ಬಹು ಮಂದಿಗೆ ಇರುವೆ ಚಂಚಲ ಮನೋವೃ ತ್ರಿ ಆಕೆಯಲ್ಲಿಲ್ಲದಿದ್ದು ನರ ಒಂದು ದೊಡ್ಡ ಗುಣ. ಆಗಲೇ ಆಕೆ ತನ್ನೆ “ಮನಸ್ಸಿನ ಸ್ಥಿರತೆಯನ್ನು ಅಳೆದುಕೊಂಡಿದ್ದ ರು. ಆಕೆ ಯಾವಾಗಲೂ ಚಜುಖಕ ಕಾಣುತ್ತಿ ದ್ದರೂ ಸ್ವಲ್ಪ ದೊಡ್ಡವಳಾಗಿ ಬೆಳೆದಾ, ಆಕೆಯ ಕಣ್ಣುಗಳಲ್ಲಿ ಉಜ್ವಲ ಕಂತಿ ಎದ್ದು ಕಾಣುತ್ತ ತ್ತು. ಆಚಾರಶೀಲ ವಾತಾವರಣದಲ್ಲಿ ಬೆಳೆದುಬಂದವ ಳಾದರೂ ಬಲುಬೇಗ ಆಧುನಿಕ ಮಾರ್ಗದಲ್ಲಿ ಹೊಂದಿಕೊಂಡರು. ತಾನು ಭಾರತದ ಹೆಣ್ಣು ಎಂಬ ಹೆಮ್ಮೆ ಕೊನೆಯ ವರೆಗೂ ಅವರ ಹೈದಯದಲ್ಲಿ ಸ್ಥಿರವಾಗಿ ನಿಂತಿತ್ತು.

ಕಮಲಳ ಬುದ್ಧಿ ಶಕ್ತಿ, ಚಾತುರ್ಯ, ನಮ್ರತೆ ನೋಡಿ ಮೋತೀಲಾಲ ರಿಗೆ ಬಲು ಹರ್ಷ. “ವಲರನ್ನು ಮುದ್ದು ಮಗಳಂತೆ ಕಾಪಾಡಿದರು. ತಮ್ಮ ಮಕ್ಕಳು ನಿಜಯಲಕ್ಷ್ಮ್ಮಿ, ಸೃಷ್ಟಾ ಇವರಂತೆ ಕಮಲಾ ಮೂರನೆಯ ಮಗಳಾದರು. ಸಾಜಾ ಜೂ ಅಷ್ಟೆ. ಇನ್ನೊಬ್ಬ ಸಹೋದರಿ ಬಂದಳೆಂಬ ಆನಂದದಿಂದ ಆಕೆಗೆ ಸ್ವಾಗತನಿತ್ತ ಸಮಾರಂಭ ಅವರ ಪ್ರೀತಿ ಯನ್ನು ತೋರಿಸುತ್ತಿತ್ತು. ಅತ್ತೆಮಾನಂದಿರ ಸೇವೆ ಕಮಲರ ಸೊತ್ತಾಗಿತ್ತು. A ಮಾವನವರು, ಯಾವಾಗಲೂ ಖಾಹಿಲೆಯಲ್ಲಿದ್ದ ಅಕ್ಕರೆಯ ಅತ್ತೆ ಫಿ ಕಮಲಳ ಕೋಮಲ ಸ್ವಭಾವ, ಸೂಕ್ಷ, ಕ್ಷ್ಮಟುದ್ಧಿ, “ಪ್ರಾ ಮಾಣಿಕೆ ತನದ ಸೇವೆ ನೋಡಿ ಮೆಚ್ಚಿದರು. ಅಷ್ಟೇ ಅಲ್ಲ, a ಅವರ ಮಾತಾಪಿತೃಗಳ ಒಂದು ಕಣ್ಣಾಗಿದ್ದರೆ ಕಮಲ ಇನ್ನೊಂದು ಕಣ್ಣಾಗಿದ್ದರು.

ಅತ್ತೆಮಾನಂದಿರಿಗೆ ಮುದ್ದಿನ ಸೊಸೆಯಾಗಿ, ಜವಹರರಿಗೆ ಪ್ರೀತಿಯ ಹೆಂಡತಿಯಾಗಿ, ನಾದಿನಿಯರಿಗೆ ಅಕ್ಕರೆಯ ಅತ್ತಿಗೆಯಾಗಿ, ಇಂದಿರೆಗೆ ಮಮತೆಯ ತಾಯಾಗಿ ಕಮಲಾ ತಮ್ಮ ದಾಂಪತ್ಯಜೀವನದ ರಥವನ್ನು ಸಾಗಿಸಿದ್ದರು.

ಸರಳೆ ಸ್ಮಭಾವ

ಕಮಲ ಮಗುವಿನಂತೆ ಸರಳ ಸ್ವಭಾನಿ. ಆತ್ಮಗೌರವದ ಅಭಿಮಾನ ವುಳ್ಳ ಸೂಕ್ಷ್ಮಗ್ರಾಹಿ. ಆಕೆಗೆ ಭಾರತದ ಸ್ವಾತಂತ್ರ್ಯ ಎಲ್ಲಕ್ಕಿಂತ ಮಿಗಿಲು. ಅದಕ್ಕಾಗಿ ಆಕೆ ತೋರಿಸಿದ ಧರ್ಯ, ಇಟ್ಟು ಕೊಂಡಿದ್ದ ನಂಬುಗೆ ಅಸದಳ ವಾದದ್ದು. ಕಮಲಾನೆಹರುರವರನ್ನು ಅರಿತುಕೊಳ್ಳುವುದು ಬಹಳ ಕಷ್ಟ. ಯಾರ ಸುಳಿವಿಗೂ ಸಿಕ್ಕದ ಮನಸ್ಸವರದು. ಗಾಳಿಯಂತೆ ಹಗುರವಾಗಿ ಕಂಡರೂ ಬಲು ಸೂಕ್ಷ್ಮಬುದ್ಧಿ. ಆಕೆಯ ವ್ಯಕ್ತಿತ್ವದಲ್ಲಿ ಅನೇಕ ಮುಖ ಗಳಿವೆ. ಅವುಗಳಲ್ಲಿ ಕಲವು ಶ್ರೇಷ್ಠ ವಾದುವು. ಇನ್ನು ಕೆಲವು ಪ್ರಾಮುಖ್ಯ ವಾದುವು. ನೆಲೆಗೆ ಸಿಕ್ಕದ ಗಾಂಭೀರ್ಯದ ಚೇತನಶಕ್ತಿಗಳವು.

ಪಂಡಿತ ಜವಹರಲಾಲರು, “ದಿ ಡಿಸ್ಕವರಿ ಆಫ್‌ ಇಂಡಿಯ” ಎಂಬ ತಮ್ಮ ಹೊಸ ಪುಸ್ತಕದಲ್ಲಿ ಕಮಲರವರ ಬಗ್ಗೆ ಬರೆಯುತ್ತಾ "ನಮ್ಮ ಮದುವೆಯಾಗಿ ೨೦ ವರ್ಷಗಳ ಮೇಲಾಗಿ ಹೋಗಿತ್ತು. ಅವಧಿಯಲ್ಲಿ ಕಮಲ ಅವಳ ಮನಸ್ಸಿನ ಮತ್ತು ಅಧ್ಯಾತ್ಮಿಕ ಬೆಳವಣಿಗೆಗಳಲ್ಲಿ ಅನೇಕ ಸಲ ಹೊಸ ಬೆಳಕನ್ನು ತೋರಿಸಿ ನನ್ನನ್ನು ಚಕಿತಳನ್ನಾಗಿ ಮಾಡಿದ್ದಾಳೆ. ಅವಳನ್ನು ನಾನು ಅನೇಕ ಮುಖಗಳಲ್ಲಿ ಕಂಡುಕೊಂಡಿದ್ದೇನೆ. ಕೊನೆಕೊನೆ ಗಂತೂ ಅವಳನ್ನರಿಯಲು ಬಹಳ ಪ್ರಯತ್ನ ಮಾಡಿದ್ದೇನೆ. ಪ್ರಯತ್ನಕ್ಕೆ ಕಮಲ ನನಗೆ ಬಹಳ ನೆರವಾದಳು. ಆದರೆ ನಾನು ಅವಳ ನಿಜವಾದ ಶಕ್ತಿ ಯನ್ನು ಅಥವಾ ಅವಳ ಸಂಪೂರ್ಣ ವ್ಯಕ್ತಿತ್ವವನ್ನು ಅರಿತು ಅರ್ಶ್ವಮಾಡಿ

ಕೊಂಡೆನೆಂದು ಹೇಳಲು ಥ್ಲೈರ್ಯವಿಲ್ಲದೆ ಹಿಂಜರಿಯುತ್ತೇನೆ. ಯಕ್ಷಿಣಿ ಯಂತೆ ಗಾಂಧರ್ವ ಮನಸ್ಸವಳದು; ತಿಳಿದುಕೊಳ್ಳುವುದೂ ಕಷ್ಟ, ಕೆಲವು ಸಲ ನಾನು ಅವಳನ್ನೇ ದಿಟ್ಟಿಸಿ ನೋಡಿದಾಗ ಯಾರೋ ಅಪರಿಚಯಸ್ತ ರೊಬ್ಬರು ನನ್ನನ್ನು ನೋಡುತ್ತಿದ್ದಂತೆ ನನಗೆ ಭಾಸವಾಗುತ್ತಿತ್ತು” ಎಂದು ಹೇಳಿದ್ದಾರೆ.

ಕಮಲರವರ ವ್ಯಕ್ತಿತ್ವದ ಸ್ವಲ್ಪ ಭಾಗವನ್ನು ತಿಳಿದುಕೊಂಡರೆಂದು ಅನ್ನುತ್ತಿದ್ದಾಗಲೇ ಅವರು ಹಿಡಿತದಿಂದ ತಪ್ಪಿಸಿಕೊಂಡು ಅವರ ಅಭಿ ಪ್ರಾಯದಿಂದ ದೂರವಾಗುತ್ತಿದ್ದರು. ಅವರನ್ನು ಯಾರು ಚೆನ್ನಾಗಿ ತಿಳಿದಿರ ಲಿಲ್ಲವೋ ಅವರಲ್ಲಿ ಕಮಲನೆಹರು ಹೊರಗಿನವರಂತೆ ವರ್ತಿಸುತ್ತಿದ್ದರು. ಹೆಚ್ಚು ಸಲಿಗೆಯೇ ಇರುತ್ತಿರಲಿಲ್ಲ. ಆದರೆ ಹತ್ತಿರದವರಲ್ಲಿ, ತಿಳಿದವರಲ್ಲಿ ಆತ್ಮೀಯರಲ್ಲಿ ಸಂತೋಷಭರಿತರಾಗಿ, ಧಾರಾಳವಾಗಿ, ಯಾವ ಸಂಕೋಚ, ರಹೆಸ್ಯವೂ ಇಲ್ಲದೆ ನಡೆದು ಕೊಳ್ಳು ತ್ತಿದ್ದ ರು.

ಕಮಲಾನೆಹೆರು ನಿರ್ಣಯ ತೆಗೆದುಕೊಳ್ಳು ವುದರಲ್ಲಿ ಬಹಳ ಚುರುಕು. ಅದು ತಪ್ಪೋ ಸರಿಯೋ, ಒಂದು ಸಲ ನಿರ್ಣಯಿಸಿದ ಮೇಲೆ ಅದಕ್ಕೆ ಸರಿ ಯಾಗಿ ಅಂಓಕೊಳ್ಳುತ್ತಿದ್ದರು. ಅವರಲ್ಲಿ ಕಸಟದ ಸೋಂಕೇ ಇರುತ್ತಿರ ಲಿಲ್ಲ. ಆತ್ಮದ್ರೋಹ ಕಂಡರಿಯರು. ಹರನಿಂದೆ ಅವರಿಗೆ ಬಲು ದೂರ.

ಕಮಲಾನೆಹರೂ ಬೆಳೆದದ್ದು ಸಿರಿವಂತರ ಮನೆಯೆಲ್ಲಿ. ೧೯೨೬ರ ವರೆಗೆ ಆಕೆಗೆ ದುಃಖ ಮತ್ತು ಕಷ್ಟ ಗೊತ್ತೇ ಇರಲಿಲ್ಲ... ಆಕೆಯ ಬಾಲ್ಯ ಜೀವನ ಪ್ರಪಂಚದಲ್ಲಿ ಯಾವ ಹೆದರಿಕೆಯೂ ಇರಲಿಲ್ಲ. ಜೀವನದಲ್ಲಿ ಭದ್ರತೆ ಇತ್ತು, ಶಾಂತಿಮಯ ವಾತಾವರಣವಿತ್ತು. ನಾಳೆಯ ಭೀತಿಯು ಸ್ವಲ್ಪವೂ ಇರಲಿಲ್ಲ. ಸ್ವಲ್ಪ ಕಾಲದಲ್ಲಿ ಎಲ್ಲವೂ ಬದಲಾವಣೆಯಾಯಿತು. ಒಂದು ಕಾಲಕ್ಕೆ ಶಾಂತವಾಗಿ ಭದ್ರವಾಗಿ ಕಂಡ ನಾಳೆಯ ಭವಿಷ್ಯ ತಟ್ಟನೆ ಬದಲಾಯಿಸಿ ಕಾಣದ ಕಾರ್ಮೊೋಡ ಕವಿಯಿತು. ಸುಖಸೌಲಭ್ಯಗಳ ತ್ಯಾಗ, ಹೃದಯದ ನೋವು ಮತ್ತು ಗಂಡನಿಂದ ಯಾವಾಗಲೂ ಅಗಲಿರ ಬೇಕಾದುಸೆಂದರ್ಬಗಳು, ಸತತ ಖಾಹಿಲೆಗಳು, ಮುಂತಾದುವು ದಿನಗಟ್ಟಿಲೆಯ

ಮಾತಾಯಿತು. ಸಿರಿವಂತಿಕೆಯ ಗರ್ಭದಲ್ಲಿ ಬೆಳೆದ ಕಮಲಾ ಕಷ್ಟ ಗಳಿಗೆ ಹೆದರಲೂ ಇಲ್ಲ; ಹೀಗೇಕಾಯಿತೆಂದು ಪ್ರಶ್ನಿಸಲೂ ಇಲ್ಲ. ಹೆಣ್ಣಿಗೆ ದತ್ತವಾಗಿ ಬಂದ ತಾಳ್ಮೆಯಿಂದ ಎಲ್ಲವನ್ನೂ ಧೈರ್ಯದಿಂದ ಎದುರಿಸಿದರು. ತುಂಬಿದ ಕೊಡದಂತೆ, ಗಾಂಭೀರ್ಯದ ಸಿರಿ, ತಾಳ್ಮೆಯ ಹೊನ್ನು ಆಕೆಯಲ್ಲಿ ನೆಲೆಸಿತ್ತು.

ನಂದಾದೀಪ

ಸುಶೀಲೆಯಾದ ಕಮಲಳ ಗರ್ಭದಲ್ಲಿ ಇಂದಿರಾ ಹುಟ್ಟಿದ ಏಳು ವರ್ಷ ಗಳ ನಂತರ ಒಂದು ಗಂಡು ಸಂತಾನವಾಯಿತು. ನೆಹರು ಮನೆತನದ ಬೆಳಗಿ ಜಾತಿ"ಜಿಳಗುವುದಾದು ಎಲರ ಆಸೆಯಾಗಿತ್ತು. ಆದರೆ ಮಗು ಹುಟ್ಟಿದ ಮೂರೇ ದಿನಗಳಲ್ಲಿ ತೀರಿಕೊಂಡಿತು. ನೆಹರೂ ಮನೆ

ಇರದ ಸಾವನ್‌ ಸಾರಜೋರುತು. ವೃದ್ಧರಾದ ಮೋತೀಲಾಲರು ಬಹಳವಾಗಿ ಕೊರಗಿದರು. lea ಬೆಳಕು ಆರಿಹೋಗುವುದೆಂದು ದುಃಖಿಸಿದರು. ಇತ್ತ ಕಮಲಾನೆಹರು ಆಗಾಗ್ಗೆ ಖಾಯಿಕೆ ಬೀಳುತ್ತಿದ್ದುದರಿಂದ ಮೋತೀಲಾಲರ ಕೊನೆಯ ಆಸೆ ಕೊನೆಗೂ ಕೃಗೂಡಲಿಸ.

ಒಂದು ದಿನ ಮೋತೀಲಾಲರು ಸಂತಪ್ತಹೃದಯರಾಗಿ ಆನಂದಭವನ ದಲ್ಲಿ ಕುರ್ಚಿಯ ಮೇಲೆ ಕುಳಿತಿದ್ದರು. ಮಗ ಜವಹರಲಾಲ್‌ ಹೊರಗಿನಿಂದ ಅಂದಿನ ಕೆಲಸ ಮುಗಿಸಿಕೋಡ) ಬಂದು ಅವರೂ ವಿಶ್ರಾಂತಿಗಯ್ಯಲು ಆಲ್ಲಿಯೇ ಸುಖಾಸೀನರಾದರು.. ಮೋತೀಲಾಲರು ಒಮ್ಮಿಂದೊಮ್ಮೆಲೇ ಗದ್ಗದ ಸ್ವರದಿಂದ ಜನಹರಲಾಲರನ್ನುದ್ದೆ ೇಶಿಸ್ಕಿ ಆನಂದಭವನದ ದೀಪ ಮುಂದೆ ಬೆಳಗುವರಾರು? ಸೀನು ಎರಡನೆಯ ಮದುವೆ ಮಾಡಿಕೋ'' ಎಂದು ಹೇಳಿದರು. ಜನಹೆರರು ತಂದೆಗೆ ಎಂದೂ ಎದುರು ವಾದಿಸಿದನರೇ

೧೦

ಅಲ್ಲ. ತಾಳ್ಮೆಯಿಂದ, ಕುಂದಿದ ಸ್ವರವುಳ್ಳವರಾದರೂ ದೃಢತೆಯಿಂದ, ಮಗಳು ಇಂದಿರೆಯ ಕಡೆ ಕೈತೋರಿಸುತ್ತಾ « ಅವಳೇ ಆನಂದಭನನದ ನಂದಾದೀಪ ೫' ಎಂದರು.

ಮೋತೀಲಾಲರಿಗೆ ಸಮಾಧಾನಕರ ಉತ್ತರ ಆದು ಹೌದೋ ಅಲ್ಲವೋ, ಜವಹರಲಾಲರು ಮಾತ್ರ ಹೃದಯತುಂಬಿದವರಾದರು.

ಚಳುವಳಿ

ವಿವಾಹವಾದ ಮೇಲೆ ಜವಹೆರಲಾಲ್‌, ಎರಡು ವರ್ಷ ಬ್ಯಾರಿಸ್ಟರ್‌ ಆಗಿ ಕೆಲಸ ಮಾಡಿದರು. ಆಸಕ್ತಿ ಇಲ್ಲದ ಕೆಲಸ ಯಾವಾಗಲೂ ಅಪೂರ್ಸವೇ. ಜವಹರರ ಮನಸ್ಸು ನಾಗಾಲೋಟದಿಂದ ಭಾರತದ ರಾಜಕೀಯದ ಬಿರುಗಾಳಿಯತ್ತ ಓಡುತ್ತಿತ್ತು. ೧೯೧೯ರಲ್ಲಿ ಜಲಿಯನ್‌ವಾಲಾಬಾಗ್‌ನಲ್ಲಿ ಹರಿದ ರಕ್ತದ ಕೋಡಿ, ಪಂಜಾಬಿನ ದುರಂತ, ಖಿಲಾಪತ್‌ ಚಳುವಳ್ಳಿ ರೌಲತ್‌ -ಕಾಯದೆಯ ಫಲಗಳು ದೇಶದ ಮೇಲೆ ಹಾಗೂ, ನೆಹರೂ ಮನೆ ತನದ ಮೇಲೆ ವಿಶೇಷ ಸರಿಣಾಮವನ್ನುಂಟುಮಾಡಿದುವು. ಗಾಂಧಿಜೀ ಯವರು ದಕ್ಷಿಣ ಆಫ್ರಿಕದ ವಿಜಯದೊಂದಿಗೆ ಭಾರತಕ್ಕೆ ಬಂದು ಭಾರತದ ರಾಜಕೀಯ ಸೂತ್ರ ವಹಿಸಿಕೊಂಡರು. ೧೯೨೦ರಲ್ಲಿ ಗಾಂಧಿಜೀ ಅಸಹಕಾರ ಚಳುವಳಿಯ ಸತ್ಯಾಗ್ರಹ ಪ್ರಾರಂಭಿಸಿದರು.

ಆನಂದಭವನದಲ್ಲಿ ತಂದೆ ಮಕ್ಕಳಿಗೆ, ಗಾಂಧಿಜೀ ಚಳುವಳಿಯ ವಿಷಯವಾಗಿ ಪ್ರತಿದಿನವೂ ಬಿಸಿಬಿಸಿ ಚರ್ಚೆಗೆಳಾಗಲು ಪ್ರಾರಂಭವಾಯ್ತು. ಜವಹರರು ಗಾಂಧಿಜೀಯ ಕಾರ್ಯಕ್ರಮವನ್ನು ಒಪ್ಪಿ ಸತ್ಯಾಗ್ರಹದಲ್ಲಿ ಧುಮುಕಲು ಮನಸ್ಸುಮಾಡಿದರು. ಮೋತೀಲಾಲರಿಗೆ ಗಾಂಧಿಜೀಯ ಕಾರ್ಯಕ್ರಮದಲ್ಲಿ ಅಷ್ಟು ನುಬಿಕೆ ಇರಲಿಲ್ಲ. ಮೋತೀಲಾಲರಿಗೂ ಜವ ಹೆರರಿಗೂ ಆಗುತ್ತಿದ್ದ ರಾಜಕೀಯ ಜಗಳ ಮನೆಯಲ್ಲಿ ಕಮಲಾನೆಹರು,

ಗಿಗಿ

ಸ್ಪರೂಪರಾಣಿಯವರ ಮೇಲೆ ಪರಿಣಾಮ ಮಾಡಿತು. ಕಮಲಾನೆಹರೂ ಮಾವ ಮತ್ತು ಪತಿಯ ನಡುವೆ ಎಷ್ಟೋ ಸಲ ರಾಯಭಾರಿಯಾಗಿ ಜಗಳ ನಿಲ್ಲಿಸುತ್ತಿದ್ದರು.

ಮದುವೆಯಾದ ಕೆಲವೇ ದಿನಗಳಲ್ಲಿ ಜವಹರರು ರಾಜಕೀಯದ ಬಿರುಗಾಳಿಯಲ್ಲಿ ಸೆರೆಸಿಕ್ಕಿದರು. ಜೀವನದ ಗೆಳತಿಗೆ ಸಲ್ಲಬೇಕಾದ ಆತ್ಮೀ ಯತೆಯನ್ನು ನೀಡಲು ಸಮಯ ಸಂದರ್ಭಗಳು ಸಾಕಷ್ಟು ಒದಗಲಿನ್ಲ. ಆದರೂ ಜವಹರಲಾಲರು ಕಮಲಾರನ್ನು ಮಾತ್ರ ಮರೆಯಲಿಲ್ಲ. ಮರೆ ಯಲು ಸಾಧ್ಯವೆ? ಸೆರೆಮನೆಯಿಂದ ಬಿಡುಗಡೆಯಾಗಿ ಹೊರಗೆ ಸ್ವತಂತ್ರ ವಾಗಿದ್ದ ಕಾಲದಲ್ಲಿ ಕಮಲಾರವರ ಸಂಗಡ ಕೆಲಕಾಲ ಕಳೆಯುತ್ತಿದ್ದರು. ಕಮಲಾ, ಜನಹಶರ ಆಸರೆಯಾಗಿದ್ದರು. ಜನಹೆರರು ರಾಜಕೀಯದ ಕೆಲಸಕ್ಕಾಗಿ ದೂರದೇಶಗಳಿಗೆ ಹೋಗಿ ಮನೆಗೆ ಬಂದಾಗ ಕಮಲಾ ಅವರಿಗೆ ಕೊಡುತ್ತಿದ್ದ ವಿಶ್ರಾಂತಿ ಮತ್ತು ಸ್ಫೂರ್ತಿಶಕ್ತಿ ಜವಹರರು ಅನೇಕ ಸಲ ಸ್ಮರಿಸಿಕೊಂಡಿದ್ದಾರೆ. ಜರ್ಕುರಿತವಾದ ಮನಸ್ಸಿಗೆ ಬಳಲಿದ ದೇಹಕ್ಕೆ ಕಮಲಾನೆಹರೂ, ಶಾಂತಿ ನೆಮ್ಮದಿಯನ್ನು ಕೊಡುತ್ತಿದ್ದರು.

ಕೊನೆಗೆ ಗಾಂಧಿಜೀಗೇ ಜಯವಾಯಿತು. ಮೋತೀಲಾಲರು ಜವ ಹರಶೊಂದಿಗೆ ಸತ್ಯಾಗ್ರಹೆ ಚಳುವಳಿಗೆ ಸೇರಲು ನಿರ್ಧರಿಸಿದರು. ೧೯೨೧ನೇ ಡಿಸೆಂಬರ್‌ ೬ನೇ ದಿನ ಮೋತೀಲಾಲ್‌ ಮತ್ತು ಜವಹರರಿಬ್ಬರೂ ದಸ್ತಗಿರಿ ಯಾದರು. ಆನಂದಭವನ ಸೋಲೀಸರನ್ನು ಕಂಡದ್ದು ಅದೇ ಮೊದಲದಿನ. ಅಂದಿನಿಂದ ಪ್ರಾರಂಭವಾದ ಪೋಲೀಸರ ಧಾಳಿ ಭಾರತಕ್ಕೆ ಸ್ವಾತಂತ್ರ್ಯ ಬರುವ ವರೆಗೂ ನಡೆಯಿತು. ಧೀರಳಾದ ಸ್ವರೂಪರಾಣಿ ತನ್ನ ಗಂಡ ಮತ್ತು ಮಗನನ್ನು ಸೆರೆಮನೆಗೆ ನಗುನಗುತ್ತ ಬೀಳ್ಕೊಟ್ಟಳು. ಕಮಲಾ ಜವಹರರ ಅಗಲಿಕೆಯಿಂದ ನೊಂದಿದ್ದರೂ ಧೈರ್ಯದಿಂದ ವರ್ತಿಸಿದರು. ಆನಂದಭವನ ದುಃಖದ ಬೀಡಾಯಿತು. ಎಲ್ಲರ ನಗುಮುಖಗಳ ಮೇಲೂ ದುಃಖದ ಪದೆ ಎಳೆಯಲ್ಪಟ್ಟಿತು. ಆನಂದಭವನವೇ ಶೋಕಸಾಗರದಲ್ಲಿ ಮುಳುಗಿತು.

ಕಾಂಗ್ರೆಸ್‌ ಅಧಿವೇಶನ ಸಾರೆ ಅಹೆಮದಾಬಾದಿನಲ್ಲಿ ನಡೆಯಿತು. ಗಾಂಧಿಜೀ, ನೆಹರು ಮನೆತನದನರಿಗೆಲ್ಲಾ ಅಲ್ಲಿಗೆ ಬರಲು ಆಮಂತ್ರಣ

೧೨

ವಿತ್ತಿದ್ದರು. ಕಮಲಾನೆಹೆರು, ಮಗಳು ಇಂದಿರಾ, ಅತ್ತೆ ಸ್ವರೂಪರಾಣಿ, ನಾದಿನಿ ಕೃಷ್ಣಾ ಇವರೊಂದಿಗೆ ಅಹಮದಾಬಾದಿಗೆ ಪ್ರಯಾಣ ಬೆಳೆಸಿದರು. ಪ್ರತಿಯೊಂದು ಕೈಲ್ವೆ ಸ್ಪೇಷನ್ನಿನಲ್ಲಿಯೊ ಕಮಲಾರವರಿಗೆ ಅಭೂತಪೂರ್ವ ಸ್ವಾಗತ ಕೊಟ್ಟು ಹಾರತುರಾಯಿಗಳನ್ನು ಅರ್ಪಿಸಿದರು. ನೆಹರೂಮನೆತನಕ್ಕೆ ದೇಶದ ಕಾಣಿಕೆ ಅದು. ಅಧಿವೇಶನ ನಡೆಯುವ ವರೆಗೆ ಸಾಬರಮತಿ ಆಶ್ರಮದಲ್ಲಿ ಗಾಂಧಿಜೀ ಬಳಿಯಲ್ಲಿದ್ದರು. ೧೫ ದಿನಗಳ ನಂತರ ಪುನಃ ಅಲಹಾಬಾದಿಗೆ ಬಂದರು. ೧೯೩೨ರ ವೇಳೆಗೆ ಎಲ್ಲ ರಾಜಕೀಯ ಖೈದಿ ಗಳನ್ನು ಸರ್ಕಾರ ಬಿಡುಗಡೆ ಮಾಡಿತು, ಆಗ ಮೋತೀಲಾಲರು ಮತ್ತು ಜವಹೆರಲಾಲರು ಬಿಡುಗಡೆಯಾದರು. ಆನಂದಭವನ ಮತ್ತೊಮ್ಮೆ ಕಳೆಕಟ್ಟತು.

ತೀವ್ರಕಾಹಿಲೆ

೧೯೩೨ರಲ್ಲಿ ನಾಭಾ ಸಂಸ್ಥಾನದಲ್ಲಿ ಜವಹರರ ದಸ್ತಗಿರಿಯಾಯಿತು. ಬಿಡುಗಡೆಯಾಗಿ ಬಂದಾಗ ಜೊತೆಗೆ | ಟೈಫಾಯಿಡ್‌ ಜ್ವರವನ್ನು ಕಟ್ಟ ಕೊಂಡು ಬಂದಿದ್ದರು. ಕಮಲಾರವರ ಆರೈಕೆ ಆಗ ಇಲ್ಲದಿದ್ದರೆ ಅಷ್ಟು ಬೇಗನೆ ಗುಣಮುಖರಾಗುತ್ತಿರಲಿಲ್ಲ.

ಗಯಾ ಕಾಂಗ್ರೆಸ್‌ ಅಧಿವೇಶನದ ನಂತರ ಮೋತೀಲಾಲರು ಮತ್ತು ಚಿತ್ತರಂಜನದಾಸರು ಸ್ವರಾಜ್ಯಸಕ್ಷವನ್ನು ಸ್ಥಾ ಪಿಸಿದರು. ಅವರಿಬ್ಬ ರೂ ಜೀವನದ ಗೆಳೆಯರಾಗಿದ್ದ ರು. ಸ್ವರಾಜ್ಯ ಪಕ್ಷದ ಅಧ್ಯಕ್ಷರಾಗಿ ದಾಸರೂ. ಕಾರ್ಯದರ್ಶಿಯಾಗಿ ನೋತೀಲಾಲರೂ ಅದರ ಸಾರಥ್ಯ ನಡೆಯಿಸಿದರು. ಕೇಂದ್ರ ಮತ್ತು ಪ್ರಾಂತೀಯ ಶಾಸನಸಭೆಗಳ ಚುನಾವಣೆಗಳಲ್ಲಿ ಅದ್ಭುತ ಜಯಗಳಿಸಿ ದೇಶದಲ್ಲೆಲ್ಲಾ ಹೊಸ ಚೈ ತನ್ಯವನ್ನುಂಟುಮಾಡಿದರು. ೧೯೨೫ ರಲ್ಲಿ ಚಿತ್ತರಂಜನದಾಸರು ಮರಣಹೊಂದಿದರು. ಅವರ ನಂತರ ಮೋತೀ ಲಾಲರೇ ಅಧ್ಯಕ್ಷರಾದರು.

೧೩

೧೯೨೫ರ ವೇಳೆಗೆ ಕಮಲಾನೆಹರು ತೀವ್ರಕಾಹಿಲೆಯಿಂದ ಹಾಸಿಗೆ ಹಿಡಿದರು. ಅನೇಕ ವರ್ಷಗಳಿಂದ ಕಮಲಾ ರೋಗದಲ್ಲಿಯೇ ನರಳುತ್ತಾ ಇದ್ದರು. ವೈದ್ಯರು ಸ್ವಿಟ್ಟರ್ಗೆ ೦ಡಿಗೆ ಕರೆದುಕೊಂಡುಹೋಗಬೇಕೆಂದು ಸಲಹೆ ಕೊಟ್ಟಿರು. ೧೯೨೬ನೇ ಮಾರ್ಚ್‌ ತಿಂಗಳಲ್ಲಿ ಪಂಡಿತ ಜವಾಹರಲಾಲ ನೆಹರು, ಕಮಲಾ, ಇಂದಿರಾ ಸ್ವರೂಪರಾಣಿ ಮತ್ತು ರಣಜಿತ್‌ ಪಂಡಿತ್‌ ಇವರೊಂದಿಗೆ ಯುರೋಪಿನ ಸುಪ್ರಸಿದ್ಧ ಆರೋಗ್ಯಧಾಮಗಳಿಗೆ ನೆಲೆವೀಡಾದ ಸುಂದರೆ ಸ್ವಿಟ್ಟನ್ನೆಂಡಿಗೆ ಪ್ರಯಾಣ ಬೆಳೆಸಿದರು. ಕಮಲಾನೆಹರು ತಿಂಗಳು ಗಟ್ಟಲೆ ಲಕ್ನೋ ನಗರದಲ್ಲಿ ಆಸ್ಪತ್ರೆಯಲ್ಲಿದ್ದರೂ ಗುಣಮುಖರಾಗಿರಲಿಲ್ಲ. ನಿತ್ರಾಣರಾಗಿ ಬರಿ ಎಲುಬದೇಹವಾಗಿದ್ದ ರು. ಗುಡ್ಡ ಗಾಡಿನ ಆರೋಗ್ಯ ಕೇಂದ್ರಗಳಾದ ಮೊಂಬಾನಾದಲ್ಲಿ, ಜಿನೀವಾದಲ್ಲಿ, ಹಾಗೂ ಸ್ವಿಟ್ಟಕ್ಲೆಂಡಿನಲ್ಲಿ ಆರೋಗ್ಯಭಾಗ್ಯ ಪಡೆದರು. ಸ್ವಲ್ಪ ದಿನಗಳ ನಂತರ ನೆಹರು ತಂಗಿ ಕೃಷ್ಣಾ ಬಂದು ಕಮಲಾರನ್ನು ಸೇರಿದರು. ಕಮಲಾರವರಿಗೆ ಆಗ ತುಂಬಾ ಸಂತೋಷ. ರೋಗ ವೇಗವಾಗಿ ಮಣವಾಗುತ್ತ ಬಂದಿತು. ಮಾವಂದಿರಾದ ಮೋತೀಲಾಲರು ಅದೇ ಸಮಯಕ್ಕೆ ವಿಶ್ರಾಂತಿ ಪಡೆಯಲು ಯೂರೋಪಿಗೆ ತೆರಳಿದ್ದರು. ಯೂರೋಪಿನಲ್ಲಿ ಕೆಲವು ತಿಂಗಳು ಕಳೆದ ನಂತರ ಕಮಲಾ ನೆಹರು, ಜವಾಹರಲಾಲರು ೧೯೨೭ರ ಡಿಸೆಂಬರ್‌ನಲ್ಲಿ ನಡೆದ ಮದ್ರಾಸ್‌ ಕಾಂಗ್ರೆಸ್‌ ಅಧಿವೇಶನದ ಹೊತ್ತಿಗೆ ಭಾರತಕ್ಕೆ ಬಂದರು.

ಕಲ್ಕತ್ತಾ ಕಾಂಗ್ರೆಸ್‌

೧೯೨೮ರಲ್ಲಿ ಕಲ್ಕತ್ತಾ ನಗರದಲ್ಲಿ ಕಾಂಗ್ರೆಸ್‌ ಅಧಿವೇಶನ ಸೇರಿತು. ಪಂಡಿತ ಮೋತೀಲಾಲರೇ ಅದರ ಅಧ್ಯಕ್ಷಸದವಿಯನ್ನಲಂಕರಿಸಿದ್ದರು. ಸೊಸೆ ಕಮಲಾಗೆ ಸಂಭ್ರಮವೇ ಸಂಭ್ರಮ. ಆದರೆ ಅಧಿವೇಶನದಲ್ಲಿಯೇ ಸಂಡಿತ ಮೋತೀಲಾಲರಿಗೂ ಮತ್ತು ಜವಹರರಿಗೂ ಬಹಿರಂಗವಾಗಿ ರಾಜಕೀಯ ವಿರೋಧ ತಲೆದೋರಿತು. ಮೋತೀಲಾಲರ ಸಾಮಂತರಾಜ್ಯ

೧೪

ಪದ ತಿಯನ್ನು ಜವಹರರು ಪ್ರಬಲವಾಗಿ ವಿರೋಧಿಸಿದರು. ಸುಭಾಷಚಂದ್ರ ಬೋಸರು ತಂದ ಸಂಪೂರ್ಣ ಸ್ವಾತಂತ್ರ್ಯದ ನಿರ್ಣಯ ಬಿದ್ದು ಹೋಯಿತು.

ಭಾರತದಲ್ಲಿ ವರ್ಷ ತರುಣರು ಎಚ್ಚೆತ್ತರು. ಹೊಸ ಜೇತನದ ಗಾಳಿಯೊಂದು ಬೀಸಿತು. ನವ ಚೈತನ್ಯವನ್ನು ಮಟ್ಟಿ ಹಾಕಲು ಯಾರಿಂದಲೂ ಸಾಧ್ಯವಾದಂತೆ ತೋರಲಿಲ್ಲ. ರೈತರು, ಕೂಲಿಕಾರರು, ವಿದ್ಯಾರ್ಥಿಗಳು, ಯುವಕರು ರಾಜಕೀಯದ ಅಭ್ಯಾಸದ ಫಲವಾಗಿ ಹೊಸ ಹುರುಪಿನಿಂದ ಕ್ರಾಂತಿಯ ಸೆರಗಿನಲ್ಲಿದ್ದರು.

ಸ್ವಾತಂತ್ರ್ಯಪ್ರತಿಜ್ಞೆ

ಹೊಸ ಶಕ್ತಿಯನ್ನರಿತ ಗಾಂಧಿಜೀ ತರುಣರ ನಾಯಕನಾದ ಜವಹರರನ್ನೇ ಕಾಂಗ್ರೆಸ್‌ ಅಧ್ಯಕ್ಷಪದನಿಗೆ ಸೂಚಿಸಿದರು. ಕಲ್ಕತ್ತೆಯಲ್ಲಿ ತಂದೆ ಅಧ್ಯಕ್ಷರು; ಲಾಹೋರಿನಲ್ಲಿ ಮಗ. ಪ್ರಪಂಚದ ಇತಿಹಾಸದಲ್ಲಿ ತಂದೆ ಯಿಂದ ಮಗನಿಗೆ ತೆರನಾದ ಪಟ್ಟ ಬಂದುದು ಇದೇ ಮೊದಲನೆಯ ಉದಾಹ:ಣೆ... ಲಾಹೋರ್‌ ಕಾಂಗ್ರೆಸ್ಸಿನ ಅಧ್ಯಕ್ಷರಾಗಿ ರಾಷ್ಟ್ರಪತಿಯಾಗಿ ವಿರಾಜಿಸಿದರು ಜವಹರಲಾಲ್‌. ರಾಷ್ಟ್ರಪತಿಯ ಪತ್ನಿಯಾಗಿ ಕಮಲಾ ಜವಹರರ ಕೆಲಸದಲ್ಲಿ ಸಹಕಾರ ನೀಡಿದರು. ರಾಷ್ಟ್ರಪತಿಯಾಗುವುದು ಒಂದು ಭಾಗ್ಯ. ಅದು ಎಲ್ಲರಿಗೂ ಸಿಕ್ಕುವುದು ದುರ್ಲಭ.

ಅಧಿವೇಶನ ಮಹತ್ವದ್ದಾಗಿತ್ತು. ಡಿಸೆಂಬರ್‌ ತಿಂಗಳಿನ ಚಳಿ ಯನ್ನು ಕೂಡ ಲಕ್ಷಿಸದೆ ಲಕ್ಷಾಂತರ ಜನ ರಾವಿ ನದಿಯ ದಂಡೆಯ ಮೇಲೆ ಸಭೆ ಸೇರಿ ಸಂಪೂರ್ಣ ಸ್ವಾತಂತ್ರ್ಯ ಗಳಿಸಲು ಪಣತೊಟ್ಟ ರು, ರಾಷ್ಟ್ರಪತಿ ಜವಹರರು, ಸ್ವಾತಂತ್ರ ತನ್ನೆ ಯನ್ನು ಓದಿದರು. ಇರದಿದ್ದ ಸಭಿಕರ ಸಮುದಾಯ ಅದನ್ನು ಪಠಿಸಿತು.

೧೫ ಸತ್ಯಾಗ್ರಹದ ಮಡಿಲಲ್ಲಿ

ದಾಂಡಿ ಮೆರವಣಿಗೆ ಪ್ರಸಂಚದಲ್ಲಿ ಹೊಸ ಚರಿತ್ರೆಯನ್ನು ಸೃಷ್ಟಿಸಿತು. ಪ್ರಪಂಚದ ದೃಷ್ಟಿಕೋನವೆಲ್ಲ ಆಗ ಭಾರತದ ಕಡೆ ತಿರುಗಿತ್ತು. ರಾಷ್ಟ್ರದ ಸ್ವಾತಂತ್ರ್ಯದ ವಿರುದ್ದ ಸಾಶವೀ ಶಕ್ತಿಯನ್ನು ಪ್ರತಿಭಟಿಸಲು ಅದು ಚಿಕ್ಕ ಉದಾಹರಣೆಯಾಗಿತ್ತು. ಬಂಡವಾಳಗಾರರ ಮೇಲೆ ಬಡವನ ದಂಗೆಯ ರೂಪದ ಪ್ರತೀಕವಾಗಿತ್ತು. ವಿಶಾಲವಾದ ಸಮುದ್ರದಿಂದ ಒಂದು ಹಿಡಿ ಉಪ್ಪನ್ನು ತಂಳಾರಿಸು ಬಡಕಲು ಶರೀರದ ವ್ಯಕ್ತಿಯ ದಾಂಡಿಯ ಮೆರವಣಿಗೆಯು, ಸೀಸರನು ರೊಬಿಕಾನ್‌ ನದಿಯನ್ನು ದಾಟ ರೋಮ್‌ ಸಾಮ್ರಾಜ್ಯ ಕಟ್ಟಲು ಹನಣಿಸಿದುದಕ್ಕಿಂತ ಮೇಲಾಗಿತ್ತು. ಸಾಬರಮತಿ ನದಿಯಿಂದ ಅರಬ್ಬೀ ಸಮುದ್ರದ ೨೦೦ ಮೈಲಿಯ ನಡೆಗೆ, ಗಾಂಧಿಜೀ ೭೮ ಸತ್ಯಾಗ್ರಹಿಗಳ ತಂಡ ಕಟ್ಟಿಕೊಂಡು ಹೊರಟಿದ್ದರು. ೧೯೨೦ನೇ ಮಾರ್ಚ್‌ ೧೨ನೇ ತಾರೀಖು ಹೊಸ ವಿಫವಾದ ಸತ್ಯಾಗ್ರಹ ಪ್ರಾರಂಭವಾಯಿತು. ಭಾರತದ ತುಂಬಾ ಉಪ್ಫಿನ ಸತ್ಯಾಗ್ರಹ ಭರದಿಂದ ಸಾಗಿತು. ಅಲಹಾ ಬಾದಿನಲ್ಲಿ ಪಂಡಿತ ಜವಹರಲಾಲರು ಪ್ರಥಮತಃ ಉಪ್ಪು ತಯಾರಿಸಿ ಸತ್ಯಾಗ್ರಹ ಪ್ರಾರಂಭ ಮಾಡಿದರು.

ಪಂಡಿತ ಜವಹರಲಾಲರ ದಸ್ತಗಿರಿಯಾಯಿತು. ಗಂಡನ ಕೆಲಸದ ಜವಾಬ್ದಾರಿ ಕಮಲಾ ವಹಿಸಿಕೊಂಡರು. ಅಸಹಕಾರ ಚಳುವಳಿಯಲ್ಲಿ ಕಮಲಾನೆಹರು ಪಾತ್ರ, ಭಾರತದ ಜನ, ಮಹಿಳೆಯರು ಮರೆಯಲಾರರು. ಜನಹರಲಾಲರನ್ನು ಮದುನೆಯಾದ್ದ ರಿಂದ ಆಕೆ ರಾಜಕೀಯದಲ್ಲಿ ಪ್ರತ್ಯಕ್ಷ ವಾಗಿ ಭಾಗ ತೆಗೆದುಕೊಳ್ಳಲು ಸ್ವಲ್ಪ ತಡೆಯಾಯಿತೋ ಎಂಬ ರೀತಿಯಲ್ಲಿ ಕಾಣುತ್ತಿತ್ತು. ಪಂಡಿತ ಜವಹೆರಲಾಲರ ಅದ್ಭುತವಾದ ವ್ಯಕ್ತಿತ್ವ ಆಕೆಯ ಮೇಲೆ ಬಿದ್ದು, ಆಕೆ ಜನಹರಲಾಲರ ಬರೀ ನೆರಳಿನಂತೆ ಭಾಸವಾಗುತ್ತಿತ್ತು. ಆದರೂ ಕಮಲಾ ತಮ್ಮ ಮೇಧಾಶಕ್ತಿ ಮತ್ತು ಕಾರ್ಯಶಕ್ತಿಯಿಂದ ತಮ್ಮದೇ ಆದ ಒಂದು ವಿಶಿಷ್ಟ ವ್ಯಕ್ತಿತ್ವವನ್ನು ಬೆಳೆಸಿಕೊಂಡರು. ಸಾವಿನ ಬಲೆಯಲ್ಲಿ ಜಾಗ್ರತೆ ಸಿಕ್ಕಿಬೀಳದಿದ್ದರೆ, ಅವರ ಶಕ್ತಿಯ ದರ್ಶನವು ಆಗುತ್ತಿತ್ತು. ಆಕೆ ಜವಹರಲಾಲರ ಹೆಂಡತಿಯೆಂದು ಹೆಸರುಗಳಿಸಲು ಎಂದೂ ಒಪ್ಪಲಿಲ್ಲ.

೧೬

ದೇಶದ ಸ್ವಾತಂತ್ರ್ಯಕ್ಕೆ ತನ್ನದೇ ಆದ ಕಾಣಿಕೆಯನ್ನರ್ಸಿಸಿ ಆದರಲ್ಲೇ ತನ್ನ ಜೀವನವನ್ನು ಬಲಿದಾನ ಮಾಡಿದ ವೀರ ರಮಣಿ ಎಂದು ಪರಿಗಣಿಸಲು ಇಷ್ಟ ಪಟ್ಟಿದ್ದಳು. ಆದರ್ಶ ರಮಣಿಯನ್ನು ಭಾರತ ಮುಕ್ತಕಂಠದಿಂದ ಸ್ಮರಿಸಿಕೊಂಡಿತು.

ಪಂಡಿತ ಜವಹರಲಾಲರು ದಸ್ತಗಿರಿಯಾಗುವುದಕ್ಕೆಂತ ಮುಂಚಿತ ವಾಗಿ ಇಬ್ಬರೂ ಜೊತೆಯಾಗಿ ಕೆಲಸ ಮಾಡಿದರು. ರಾಜಕೀಯ ಕಾರ್ಮೋಡ ಗಳು ಕವಿದು ದೇಶದಲ್ಲೆಲ್ಲಾ ವಿಸ್ಸವವಾಗುವ ಕ್ರಾಂತಿಯ ಕಾಲವದು. ಅಸಹಕಾರ ಚಳುವಳಿ ಪ್ರಾರಂಭವಾಗಿ ಜವಹರರು ವಿಸ್ರಿಲ್‌ ತಿಂಗಳಲ್ಲಿ ದಸ್ತಗಿರಿಯಾದರು... ಅಲಹಾಬಾದ್‌ ನಗರ ಮತ್ತು ಜಿಲ್ಲೆಯಲ್ಲಿ ಹೆಸರಾಂತ ಕಾಂಗ್ರೆಸ್‌ ಕಾರ್ಯಕರ್ತರೆಲ್ಲಾ ಸೆರೆಮನೆ ಸೇರಿದರು.

ಭಾರತದಲ್ಲಿ ಹೊಸ ಯುಗವೇ ಪ್ರಾರಂಭವಾಯಿತು. ಗಂಡಸರೆಲಾ ಸಾಮಾನ್ಯವಾಗಿ ಸೆರೆಮನೆ ಸೇರಿದ್ದರು. ಚಳುವಳಿ ನಡೆಸುವ ಜವಾಬ್ದಾರ್ಗಿ ಹೆಣ್ಣುಮಕ್ಕಳ ಮೇಕೆ ಬಿದ್ದಿತು. ಸಲ ಚಳುವಳಿಯಲ್ಲಿ ಭಾಗವಹಿಸಿದಷ್ಟು ಸ್ತ್ರೀಯರು ಹಿಂದೆಂದೂ ಭಾಗವಹಿಸಿರಲಿಲ್ಲ. ಇದು ಬ್ರಿಟಿಷ್‌ ಸರಕಾರವನ್ನೇ ಅಲ್ಲದೆ ಭಾರತೀಯರನ್ನೂ ಅಚ್ಚರಿಗೊಳಿಸಿತು. ಶ್ರೀಮಂತ ಕನ್ನಿಕೆಯರು, ಮಧ್ಯಮತರಗತಿಯ ಸ್ತ್ರೀಯರು, ಕೂಲಿಕಾರ ಹೆಂಗಸರು, ಸಾವಿರಗಟ್ಟಲೆ ಪೋಲೀಸರ ಲಾಠಿ ಏಟನ ರುಚಿ ನೋಡಿದರು. ಸರ್ಕಾರದ ರಾಕ್ಷಸೀ ನಡವಳಿಕೆಗಳನ್ನು ತಮ್ಮ ಸ್ತ್ರೀಸಹಜವಾದ ವಿನಯದಿಂದ ಎದುರಿಸಿ ಸರ್ಕಾರ ವನ್ನು ನಾಚಿಸಿದರು. ಅವರು ನಡೆಸಿದ ಚಳುವಳಿಯ ವ್ಯವಸ್ಥೆ ಯು ತುಂಬಾ ಶ್ಲಾ ಘನೀಯನಾಗಿತ್ತು.

೧೯೩೦ರಲ್ಲಿ ಅಲಹಾಬಾದಿನಲ್ಲಿ ಎಲ್ಲ ಕೆಲಸಗಾರರೂ ಸೆರೆಮನೆಯನ್ನು ಸೇರಿದ್ದ ರು. ಚಳುವಳಿ ನಡೆಸುವ ದೊಡ್ಡ ಜವಾಬ್ದಾರಿ ಅನನುಭವಿಯಾದ ಕಮಲಾನೆಹರುರವರ ಮೇಲೆ ಬಿತ್ತು. ರ್ಯದಿಂದ ಮುಂದೆ ಬಂದು ಕೆಲಸದ ಜವಾಬ್ದಾರಿಯನ್ನು ಹೊತ್ತು ಯಶಸ್ವಿಯಾಗಿ ಕೆಲಸಮಾಡಿದರು. ಅವರಲ್ಲಿದ್ದ ಅಗಾಧವಾದ ಸಂಘಟನಾಶಕ್ತಿ ಮತ್ತು ಹುಮ್ಮಸ್ಸು ಅನುಭವ

೧೭

ಇಲ್ಲವೆಂಬ ಕೊರತೆಯನ್ನು ಹೋಗಲಾಡಿಸಿ, ಸ್ವಲ್ಪ ಕೊಲದಲ್ಲಿಯೇ ಕಮಲಾ ನೆಹರು ಅಲಹಾಬಾದಿನ ಮಕುಟಿಮಣಿ, ಆದರ್ಶನಾರಿಯಾದರು.

ಕಮಲಾನೆಹೆರು ಅಲಹಾಬಾದಿನಲ್ಲಿ ಮೊದಲು ತೆಗೆದುಕೊಂಡ ಕೆಲಸ ಸ್ವಯಂಸೇವಕೆಯರ ತರಬೇತು. ನಾದಿನಿ ಕೃಷ್ಣಾ, ತನ್ನ ಉಪಾಧ್ಯಾಯಿನಿ ವೃತ್ತಿಗೆ ರಾಜೀನಾಮೆ ಕೊಟ್ಟು ರಾಜಕೀಯ ರಂಗದಲ್ಲಿ ಧುಮುಕಿ ಕಮಲಾ ರವರನ್ನು ಸೇರಿ, ಅವರ ಸಹೆಕೆಲಸಗಾರಳಾಗಿ ಸಹಾಯ ಮಾಡಿದಳು. ಬೆಳಗಿನಿಂದ ಸಾಯಂಕಾಲದ ವರೆಗೆ ಉರಿಯುವ ಬಿಸಿಲಲ್ಲಿ ಕೆಲಸವನ್ನು ಮಾಡುತ್ತಿದ್ದರು ಕಮಲಾ. ಪುರುಷರಂತೆ ಪೋಷಾಕು ಧರಿಸಿ, ಆವರಿಗೆ ಯಾವುದರಲ್ಲೂ ಕಡಿಮೆಯಿಲ್ಲನೆಂದು ತೋರಿಸಬೇಕೆಂದು ಅವರ ಮನಸ್ಸು. ಕಮಲಾ ಹೆಣ್ಣುಮಕ್ಕಳ ವಾದಿ. ಅವರ ಹಕ್ಳುಬಾಧ್ಯತೆಗಳ ನಿಷಯದಲ್ಲಿ ಗಂಡಸು ಸಮಾಜದ ಎದುರು ವಾದಿಸಿ ವಿರೋಧ ಕಟ್ಟಿಕೊಂಡ ಧೀರೆ. ಅವರ ವಿರೋಧದ ಬಿಸಿ ಜವಹೆರರಿಗೂ ತಟ್ಟಿತ್ತು.

ಸ್ಪಯಂಸೇವಿಕೆಯರ ನಾಯಕಿಯಾಗಿ ಕಮಲಾನೆಹರು ಬೆಳಿಗ್ಗೆ ಘಂಟೆಗೆ ಎದ್ದು ಬೆಳಗಿನ ಕವಾಯತಿಗೆ ಸಿದ್ಧವಾಗಬೇಕಿತ್ತು. ಘಂಟಿಗೆ ವಿದೇಶೀ ವಸ್ತ್ರಗಳ ಬಹಿಷ್ಕಾರದ ಪ್ರಚಾರ, ಉಪ್ಪು ತಯಾರುಮಾಡುವಿಕೆ, ಮುಂತಾದ ಕೆಲಸಗಳಿಗೆ ಹೋಗಬೇಕಾಗಿತ್ತು. ಚಳಿಗಾಲ ಮತ್ತು ಬೇಸಿಗೆ ಕಾಲದ ಪರಿವೆಯಿಲ್ಲದೆ ಅವ್ಯಾಹತವಾಗಿ ಕಮಲಾನೆಹೆರು ಚಳುವಳಿಯ ಕೆಲಸ ಮಾಡಿದರು.

ಒಂದು ದಿನ ಕಮಲಾನೆಹರು ಮಟಮಟ ಮಧ್ಯಾಹ್ನ ತಮ್ಮ ಕಾರಿನಲ್ಲಿ ಕುಳಿತುಕೊಂಡು ವಿದೇಶೀ ವಸ್ತ್ರಗಳ ಬಹಿಸ್ಟಾರದ ಪ್ರಚಾರಕ್ಕಾಗಿ ಮುಖ್ಯವಾದ ಚೌಕಿಯೊಂದಕ್ಕೆ ತೆರಳಿದರು. ಅಂಗಡಿಗೆ ಬರುವವರಿಗೆಲ್ಲ ಉಪದೇಶ ಮಾಡಿ, ಕೆಲಸನಿಲ್ಲದಾಗ ಬಿಸಿಲ ಉರಿಯನ್ನು ತಾಳಲಾರದೆ ತಮ್ಮ ಕಾರಿನಲ್ಲಿ ಬಂದು ಕುಳಿತುಕೊಳ್ಳು ತ್ತಿದ್ದರು. ಇದನ್ನು ನೋಡುತ್ತಿದ್ದ ಒಬ್ಬ ಮಹಾನುಭಾವ ಕಮಲಾರವರ ಹತ್ತಿರ ಬಂದು "ವಿದೇಶೀ ವಸ್ತ್ರಗಳಿಗೆ ಬಹಿಸ್ಟಾರ ಹಾಕಿರೆಂದು ಉಪದೇಶ ಮಾಡುವ ನೀವು ವಿದೇಶೀ ಕಾರಿನಲ್ಲೇಕೆ

೧೮

ಕೂಡುತ್ತೀರಿ' ಎಂದು ವ್ಯಂಗ್ಯವಾಗಿ ಹಾಸ್ಕಮಾಡಿದ. ಕಮಲಾ ಅದನ್ನು ಮನಸ್ಸಿಗೆ ಹಚ್ಚಿಕೊಳ್ಳಲಿಲ್ಲ. ಆದರೆ ಮಹಾನುಭಾವನ ವ್ಯಂಗ್ಯದಲ್ಲಿ ಸತ್ಯವಿದೆಯೆಂದು ತಿಳಿದು ತನ್ನ ಡೆ 3ನರನನ್ನು ಕರೆದು ಕಾರನ್ನು ವಾಪಸು ಆನಂದಭವನಕ್ಕೆ ಕಳುಹಿಸಿ, ಬಿಸಿಲಲ್ಲಿ ಬರೀ ಕಾಲಿನಲ್ಲಿ ಒಬ್ಬರೇ ಫಿಟಿಂಗ್‌ ನಾರ

ದಷ್ಟು ದಿನ ಕಾರನ್ನು ಉಪಸಯೋಗಿಸಲಿಲ.

ಅಲಹಾಬಾದ್‌ ನಗರವೊಂದೇ ಆಕೆಯ ಕಾರ್ಯಕ್ಷೇತ್ರವಾಗಿರಲಿಲ್ಲ. ಜಿಲ್ಲೆಯಲ್ಲಿಯೂ ಅವರ ಕಾರ್ಯಕ್ರಮ ಪಸರಿಸಿತು. ಸ್ವಯಂಸೇವಿಕೆಯರನ್ನು ತಂಡತಂಡವಾಗಿ ಕಟ್ಟಿಕೊಂಡು ಹಳ್ಳಿಗಳನ್ನು ಸುತ್ತಿದರು. ರಾಜಕೀಯ ಪ್ರಚಾರ ಭಾಷಣಗಳು, ವಿದೇಶೀ ವಸ್ತ್ರ ಬಹಿಷ್ಕಾರ, ಮದ್ಯಪಾನ ನಿರೋಧ ಮುಂತಾದ ಕಾರ್ಯಕ್ರಮಗಳು ಹಳ್ಳಿ ಗಳಲ್ಲಿಯೂ ಪ್ರಾರಂಭವಾಯಿತು. ಒಂದು ಹಳ್ಳಿಯಲ್ಲಿ ಕಮಲಾ ಭಾಷಣ ಮಾಡುತ್ತಿದ್ದರು; ಒಬ್ಬ ಹಣ್ಣು ಹಣ್ಣು ಮುದುಕ ಆಕೆಯ ಭಾಷಣ ಕೇಳಿ, ಸಭೆ ಮುಗಿದ ಮೇಲೆ ಆಕೆಯ ಹತ್ತಿರ ಬಂದು ತಾನೂ ಖಾದಿಬಟ್ಟಿಯನ್ನು ತೊಡುವ ಮನಸ್ಸುಳ್ಳ ವನಾದರೂ ನಿದೇಶೀ ಬಟ್ಟೆ ಬಹಳ ಸುಲಭ ದರದಲ್ಲಿ ಸಿಕ್ಚುವುದರಿಂದ ಆದನ್ನು ನಿರ್ವಾಹ ವಿಲ್ಲದೆ ಕೊಂಡುಕೊಳ್ಳ ಬೇಕಾಗುತ್ತದೆಂದೂ ಬಟ್ಟೆಯನ್ನು ಸುಟ್ಟು ಹಾಕಿದರೆ ತನಗೆ ಉಡಲು ಬೇರೊಂದು ಬಟ್ಟೆ ಯಿಲ್ಲವೆಂದೂ ತನ್ನ ಕಡು ದಾರಿದ್ರ್ಯವನ್ನು ತೋಡಿಕೊಂಡ. ತಕ್ಷಣ ಕಮಲಾ ಶೈತನಿಗೆ ಕೆಲವು ಹಣ ಕೊಟ್ಟು ಖಾದಿ ಬಟ್ಟೆ ಕೊಂಡುಕೊಳ್ಳಲು ಸಹಾಯಮಾಡಿದರು.

ಇನ್ನೊಂದು ದಿನ ದಿನದ ಚಳುವಳಿಯ ಕೆಲಸ ಮುಗಿಸಿಕೊಂಡು ಮನೆಗೆ ಬರುತ್ತಿದ್ದರು. ದಾರಿಯಲ್ಲಿ ಒಂದು ಅಂಗಡಿಯ ಮುಂದೆ ಒಬ್ಬಳು ಕಡು ಭಿಕಾರಿಣಿ ಹೆಂಗಸು ಕಂಕುಳಲ್ಲಿ ಮಗುವೊಂದನ್ನು ಕಟ್ಟಿಕೊಂಡು ಕೈಜೋಡಿಸಿ ತನ್ನ ಮಗುನಿನ ಆಹಾರಕ್ಕಾಗಿ ಭಿಕ್ಷೆ ಬೇಡುತ್ತಿದ್ದಳು. ತಕ್ಷಣ ಅಲ್ಲಿಯೇ ಕೆಲವು ಕಾಲ ಕಮಲಾ ನಿಂತು ದೃಶ್ಯವನ್ನು ನಿರೀಕ್ಷಿಸುತ್ತಿದ್ದರು. ಅಂಗಡಿಯವನು ಭಿಕಾರಿಣಿಯನ್ನು ಭಿಕ್ಷೆ ಕೊಡದೇನೇ ಹೊರದಬ್ಬಿದನು. ಕೂಡಲೇ ಕಮಲ ಭಿಕಾರಿಣಿಯನ್ನು ಕರೆದು ಮಗುವನ್ನು ಎತ್ತಿಕೊಂಡು

೧೯

ಮುದ್ದಿಸಿ, ಆಕೆಯ ಕೈಯಲ್ಲಿ ಒಂದು ರೂಪಾಯನ್ನು ಕೊಟ್ಟು ಮಗುವಿಗೆ ಹಾಲು ಕೊಡಿಸೆಂದು ಹೇಳಿದರು. ಕಮಲಾ ತಾಯಿಯಾಗಿದ್ದ ವರು. ತಾಯಿಯ ಹೃದಯವನ್ನು ಅರಿತುಕೊಂಡರು.

ಕಮಲಾನೆಹರು ಪ್ರಯಾಗದಲ್ಲಿ ಒಂದು ಸಲ ೫೦,೦೦೦ ಜನ ಸಮೂಹದ ನಾಯಕಿಯಾಗಿ ಮೆರವಣಿಗೆಯನ್ನು ತೆಗೆದಿದ್ದರು. ಮೆರವಣಿಗೆ ಗಂಗಾನದಿಯ ವರೆಗೂ ಹೋಗಿ ಅಲ್ಲಿ ಚದುರುವುದಿತ್ತು. ಮೆರವಣಿಗೆ ಆಲ್ಬರ್ಟ್‌ ರಸ್ತೆಗೆ ಬರುವಪ್ಪರಲ್ಲಿ ಪೋಲೀಸರು ಬಂದು ಅದನ್ನು ತಡೆದರು. ಮೆರವಣಿಗೆಯೂ ಅಲ್ಲಿಯೇ ಕುಳಿತುಬಿಟ್ಟಿತು. ಅರ್ಧರಾತ್ರಿಯ ವರೆಗೂ ಕಮಲಾ ಮತ್ತು ಅವರ ಸಂಗಡಿಗರು ಚದುರಲೇ ಇಲ್ಲ... ಖಾಯಿಲೆಯಲ್ಲಿ ಮಲಗಿದ್ದ ಮೋತೀಲಾಲರಿಗೆ ಇದು ತಿಳಿಯಿತು. ಆರೋಗ್ಯದ ಕಡೆ ಲಕ್ಷ ಮಾಡದೆ ಧಾವಿಸಿ ಬಂದು ಪೋಲೀಸರು ತಡೆಹಾಕಿದ್ದ ಸುತ್ತನ್ನು ಭೇದಿಸಿ ಕೊಂಡು ಮೆರವಣಿಗೆ ಸುಸೂತ್ರವಾಗಿ ಹೋಗಲು ಅನುವು ಮಾಡಿಕೊಟ್ಟಿರು.

ಸಂಯುಕ್ತ ಪ್ರಾಂತ್ಯದಲ್ಲಿ ಕರನಿರಾಕರಣ ಚಳುವಳಿ ಉಗ್ರರೂಪವನ್ನು ತಾಳಿತು... ಕಮಲಾನೆಹರು ಮತ್ತು ಆಕೆಯ ಸಂಗಡಿಗರ ಚಟುವಟಿಕೆ ಗಳನ್ನು ಸರ್ಕಾರ ಉದಾಸೀನ ಮಾಡಲು ತಯಾರಿರಲಿಲ್ಲ. ಹಳ್ಳಿ ಗರನ್ನು ಹೆದರಿಸಿ ಅವರನ್ನು ತಪ್ಪುದಾರಿಗೆ ತೆಗೆದುಕೊಂಡು ಹೋಗುತ್ತಿರುವರೆಂಬ ಆಪಾದನೆಯ ಮೇಲೆ ಸರ್ಕಾರ ಅವರನ್ನು ಬಂಧಿಸಿತು. ಪಂಡಿತ ಮದನ ಮೋಹನ ಮಾಳವೀಯರ ಜೊತೆಗೆ ಕಮಲಾನೆಹರು, ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ತಾತ್ಕಾಲಿಕ ಸದಸ್ಯರಾಗಿದ್ದರು. ೧೯೩೧ನೇ ಜನವರಿ ೧ನೇ ತಾರೀಖು ಕಮಲಾನೆಹರುರವರ ದಸ್ತಗಿರಿಯಾಯಿತು. ದಸ್ತಗಿರಿಯಾದಾಗ ವೃತ್ತಪತ್ರಿಕಾ ಪ್ರತಿನಿಧಿಗಳು ಆಕೆಯನ್ನು ಸಂದೇಶ ಕೊಡಲು ಕೇಳಿಕೊಳ್ಳಲು, ಆಕೆ ಹೀಗೆಂದರು :

« ನನ್ನ ಗಂಡ ಹಾಕಿಕೊಟ್ಟ ಪವಿತ್ರ ಮಾರ್ಗದಲ್ಲಿ ನಾನೂ ಹೋಗು ತ್ತಿರುವುದು ನನಗೆ ಸಂತೋಷದ ಮತ್ತು ಹೆಮ್ಮೆಯ ವಿಷಯವಾಗಿದೆ. ದೇಶ ಮತ್ತು ಜನ ಭಾರತದ ಸ್ವಾತಂತ್ರ್ಯಜ್ಯೋತಿಯನ್ನು ಆಚಂದ್ರಾರ್ಕವಾಗಿ ಬೆಳಗುವಂತೆ ಮಾಡುತ್ತಾರೆಂದು ನಂಬುತ್ತೇನೆ '',

೨೦

ಕಮಲಾನೆಹರುರವರು ದಸ್ತಗಿರಿಯಾದ ಸುದ್ದಿ ಮೋತೀಲಾಲರನ್ನು ಕಂಗೆಡಿಸಿತು. ಕಲ್ಕತ್ತೆಯಲ್ಲಿ ವೈದ್ಯೋಪಚಾರ ತೆಗೆದುಕೊಳ್ಳು ತ್ರಿದ್ದವರು ಅಲಹಾಬಾದಿಗೆ ಧಾನಿಸಿಬಂದರು.

ಮೋತೀಲಾಲರಿಗೆ ಬರಬರುತ್ತಾ ಕಾಯಿಲೆ ಜೋರಾಗುತ್ತಾ ಬಂದಿತು. ಕಾರ್ಯದ ಭಾರ, ಜವಾಬ್ದಾರಿಯೂ ಹೆಚ್ಚಾಗಿತ್ತು. ಹಿಂದಿನ ಸಮಯ ಗಳಲ್ಲಿ ಖಾಹಿಲೆಯನ್ನು ಜಯಪ್ರದವಾಗಿ ಹೊಡೆದಟ್ಟಿದ್ದರು. ಸಲವೂ ಹಾಗೆಯೇ ಆಗುತ್ತದೆಂದು ತಿಳಿದಿದ್ದರು. ಮೋತೀಲಾಲರ ಖಾಹಿಸೆಯ ನಿಮಿತ್ತ ಸ್ಟಾತಂತ್ರ ದಿನಾಚರಣೆಯ ದಿನ ಪಂಡಿತ ಜವಹರಲಾಲ್‌ ನೆಹರು, ರಣಜಿತ್‌ ಪಂಡಿತರ ಬಿಡುಗಡೆಯಾಯಿತು. ಗಾಂಧಿಜೀಯ ಬಿಡುಗಡೆಯೂ ಆಯಿತು. ಕಾರ್ಯಸನಿತಿ, ಪರಿಸ್ಥಿತಿಯನ್ನು ಗಮನಿಸಿ ಬೇರೆಯ ನಿರ್ಧಾರ ತೆಗೆದುಕೊಳ್ಳ ಲೆಂದು ಸರ್ಕಾರದ ಅಭಿಪ್ರಾಯವಿತ್ತು. ತಾತ್ಕಾಲಿಕ ಕಾರ್ಯ ಸಮಿತಿಯ ಸದಸ್ಯರಾದ ಕಮಲಾನೆಹರು ಸಹ ಅಂದೇ ಬಿಡುಗಡೆಯಾದರು.

ಸ್ಮರಣೆಯ ದಿನ

ಗಾಂಧಿಜೀ ಮತ್ತು ಇತರ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿಯ ಸದಸ್ಯರ ದಸ್ತಗಿರಿಯಾದನಂತರ ಪಂಡಿತ್‌ ಮೋತೀಲಾಲರು ಚಳುವಳಿಯ ನಾಯಕತ್ವ ವಹಿಸಿಕೊಂಡಿದ್ದರು. ಉರಿಬಿಸಿಲಿನಲ್ಲಿ ಹೆಣ್ಣುಮಕ್ಕಳು ಬೆಂದು ಚಳುವಳಿಯ ಬಿಸಿಗಾಳಿಯಲ್ಲಿ ಬಾಡುತ್ತಿದ್ದುದು ಮೃದುಹೃದಯದವರಾದ ಮೋತೀಲಾಲರಿಗೆ ಸರಿಬೀಳಲಿಲ್ಲ. ಆದರೆ ದೇಶದ ನಾಡಿಯನ್ನು ತಿಳಿದ ಮೋತೀಲಾಲರು ಅವರನ್ನು ಧ್ಲರ್ಯಗುಂದಿಸಲಿಲ್ಲ. ಅವರ ಹೆಂಡತಿ ಸ್ವರೂಪರಾಣಿ, ಮಗಳು ಹಾಗೂ ಸೊಸೆ ಅವರೇ ಪ್ರತ್ಯಕ್ಷ ಭಾಗವಹಿಸಿದ್ದರು. ಅದರಲ್ಲೂ ಕಮಲಾರವರ ಕಾರ್ಯಶಕ್ತಿಯನ್ನು ನೋಡಿ ಮೆಚ್ಚಿದ್ದರು.

ಭಾರತದಲ್ಲಿಲ್ಲಾ ೧೯೩೧ನೇ ಜನವರಿ ೨೬ನೇ ತಾರೀಖು ಮೋತೀ ಲಾಲರ ಆಜ್ಞೆಯಂತೆ "ಸ್ಮರಣೆಯ ದಿನ'ವನ್ನಾಗಿ ಆಚರಿಸಾಲಾಯಿತು.

ವಿ

ಸರ್ಕಾರ, ಸಭೆಗಳನ್ನು ನ್ಯಾಯೆಬಾಹಿಶವೆಂದು ಸಾರಿತು. ಪೋಲೀಸರು ಅಲ್ಲಲ್ಲಿ ಲಾಠಿ ಏಟನನಿಂದ ಸಭೆಗಳನ್ನು ಚದುರಿಸಿದರು. ಮೋತೀಲಾಲರು ಹಾಸಿಗೆ ಹಿಡಿದು ಮಲಗಿದ್ದರೂ ಅಲ್ಲಿಂದಲೇ "ಸ್ಮರಣೆಯ ದಿನ'ದ ವ್ಯವಸ್ಥೆ ಯನ್ನು ಮಾಡಿದ್ದರು. ತಂತಿ, ಬೆಲಿಫೋನಾಗಲಿ, ಸತ್ರ ಆಥವಾ ವರ್ರಮಾನ ಪತ್ರಗಳ ಮುಖಾಂತರವಾಗಲೀ ಇದನ್ನು ತಿಳಿಸುವಂತಿರಲಿಲ್ಲ. ಆದರೂ ಹೇಗೋ ಭಾರತದ ಮೂಲೆ ಮೂಲೆಗಳಲ್ಲಿಲ್ಲಾ ದಿನಾಚರಣೆಯನ್ನಾ ಚರಿಸ ಲಾಯಿತು. ಸ್ಮರಣೆಯ ದಿನ ಮಂಡಿತವಾದ ನಿರ್ಣಯದಲ್ಲಿ ಭಾರತದ ಮಹಿಳೆಯರು ದೇಶಕ್ಕಾಗಿ ಶ್ರಮಿಸಿ ಬಲಿದಾನ ಮಾಡಿದ ವಿಷಯದಲ್ಲಿ ಮೆಚ್ಚಿಗೆಯನ್ನು ತೋರಿಸಲಾಗಿತ್ತು.

ಮೋತೀಲಾಲರಿಗೆ ಖಾಹಿಲೆ ಜೋರಾಗುತ್ತ ಬಂದಿತು. ಜವಹೆರ್‌, ಕಮಲಾ, ವಿಜಯಲಕ್ಷ್ಮಿ , ರಣಜಿತ್‌, ಕೃಷ್ಣಾ » ಸ್ವರೂಪರಾಣಿ ಇವರೆಲ್ಲರೂ ಸರದಿಪ್ರಕಾರ ಮೋತೀಲಾಲರ ಶುಶ್ರೂಷೆಗೈ ಯಲಾರಂಭಿಸಿದರು. ಗಾಂಧಿಜೀ ಯರವಾಡ ಸೆರೆಮನೆಯಿಂದ ಬಿಡುಗಡೆಯಾದ ಕೂಡಲೇ ಚಿಂತಾಜನಕ ಸ್ಪಿತಿಯಲ್ಲಿದ್ದ ಮೋತೀಲಾಲರನ್ನು ನೋಡಲು ಅಲಹಾಬಾದಿಗೆ ಬಂದರು. ಡಾ| ಅನ್ಸಾರಿ, ಡಾ| ಜೀವರಾಜ ಮೆಹ್ತ, ಡಾ| ಬಿಧನಚಂದ್ರ ರಾಯ್‌, ಮೋತೀಲಾಲರನ್ನು ಪರೀಕ್ಷಿಸಿ, ಲಕ್ಲೋಗೆ ಎಕ್ಸ್‌ರೆ ಪರೀಕ್ಷೆಗಾಗಿ ಕರೆದು ಕೊಂಡು ಹೋಗಬೇಕೆಂದು ಸಲಹೆಯಿತ್ತರು. ಜವಹರ್‌, ಸ್ವರೂಪರಾಣಿ ಮೋತೀಲಾಲರನ್ನು ಕಾರಿನಲ್ಲಿ ಕರೆದುಕೊಂಡು ಹೋದರು. ರೋಗವು ಉಲ್ಬಣವಾಯಿತು. ಫೆಬ್ರುವರಿ ೫ನೇ ತಾರೀಖು ಮೋತೀಲಾಲರು ಆನಂದ ಭವನವನ್ನು ದುಃಖಸಮುದ್ರದಲ್ಲಿ ಮುಳುಗಿಸಿ ಅನಂತವಾಗಿ ಅಗಲಿಬಿಟ್ಟಿರು.

ದುಃಖಶಮನಮಾಡಿಕೊಳ್ಳಲು, ಪಂಡಿತ ಜವಹರಲಾಲರು ಕಮಲಾ ಮತ್ತು ಇಂದಿರೆಯರೊಂದಿಗೆ ಸಿಂಹಳ ದ್ವೀಪಕ್ಕೆ ಪ್ರಯಾಣ ಬೆಳೆಸಿದರು. ಅಲ್ಲಿ ಕೆಲವು ವಾರಗಳನ್ನು ಕಳೆದು ಪುನಃ ಅಲಹಾಬಾದಿಗೆ ಹಿಂದಿರುಗಿದರು. ಸಿಂಹಳದ ಜನರು ಜವಹರ ದಂಪತಿಗಳಿಗೆ ಅದುತವಾದ ಸ್ವಾಗತವಿತ್ತರು. ಅದು ಭಾರತದ ಸ್ಟಾತಂತ್ರ್ಯಯುದ್ಧದ ಯೋಧರಿಗೆ ಕೊಡುವ ಸನ್ಮಾನದ ಪ್ರತೀಕವಾಗಿತ್ತು.

ಎ.

ಸಿಂಹಳದ್ವೀಪದಿಂದ ಕಮಲಾ ಮತ್ತು ಜವಹರಲಾಲರು ದಕ್ಷಿಣ ಭಾರತದ ಪ್ರವಾಸ ಕೈಗೊಂಡು, ತಿರುವಾಂಕೂರು, ಕೊಚೆನ್‌, ಮಲಬಾರ್‌, ಮೈಸೂರು, ಹೈದರಾಬಾದ್‌ ಮುಂತಾದ ಸಂಸ್ಥಾನಗಳಿಗೆ ಬೇಟ ಕೊಟ್ಟರು.

ಆಗಲೇ ಕಮಲಾನೆಹರು ಕೂಡ ಮೈಸೂರಿಗೆ ಬಂದುದು.

ಕಮಲಾನೆಹರು ಮತ್ತು ಜವಹರಲಾಲರು ಹೈದರಾಬಾದಿಗೆ ಶ್ರೀಮತಿ ಸರೋಜಿನಿ ನಾಯ್ದು ರವರನ್ನು ಭೇಟಿಯಾಗಲು ಹೋಗಿದ್ದರು. ಹೈದರಾ ಬಾದಿನ ಗಣ್ಯ ಮಹಿಳೆಯರು ಒಂದು ಸಣ್ಣ ಸಭೆ ಸೇರಿಸಿ ಕಮಲಾರವರನ್ನು ಸನ್ಮಾನಿಸಿದರು. ಸಭೆಯಲ್ಲಿ ಕಮಲಾ ಭಾಷಣ ಮಾಡಿದರು. ಭಾಷಣದಲ್ಲಿ ಮಹನೀಯರ ಮೇಲೆ ಮಹಿಳೆಯರು ಹೂಡಿದ ಚಳುವಳಿಯನ್ನು ಚರ್ಚಿಸುತ್ತ, ಗಂಡಸಿಗೆ ಯಾವಾಗಲೂ ಹೆದರಿ ನಡೆದುಕೊಳ್ಳದ್ಕೆ ಅವರು ಹೇಳಿದ್ದ ಕ್ರೈ ಹೂಗುಟ್ಟಿ ಬಾರದೆಂದು ಉಪದೇಶಿಸಿದರು. ಇದಾದ ಮೂರು ವಾರಗಳ ಮೇಲೆ ಒಂದು ಚಮತ್ಕಾರ ನಡೆಯಿತು. ಹೈದರಾಬಾದಿನ ಗಣ್ಯನೊಬ್ಬ ಕಮಲಾಗೆ ಒಂದು ಕಾಗದ ಬರೆದಿದ್ದ. ಆದರಲ್ಲಿ ಕಮಲಾ ನೆಹರು ಬಂದು ಹೋದಂದಿನಿಂದ ಆತನ ಹೆಂಡತಿಯ ನಡವಳಿಕೆ ಮಾರ್ಬ್ಸಾಡು ಆಗಿರುವುದಾಗಿಯೊ, ತಾನು ಹೇಳಿದುದಕ್ಕೆ ಪ್ರತಿವಾದಿಸುತ್ತ, ತಾನಾಡಿದ ಮಾತನ್ನು ಕೇಳುತ್ತಲೇ ಇಲ್ಲವೆಂದೂ, ಜೋರುಮಾಡಿದರೆ ವಿರುದ್ಧ ತನ್ನ ಮನಸ್ಸಿಗೆ ಬಂದಂತೆ ಮಾಡುತ್ತಾಳೆಂದೂ ಬರೆದಿದ್ದರು. ಕಮಲಾ ನಿಜಯಿ ಯಾದೆನೆಂದು ಜವಹರರನ್ನು ಜ್ಞಾ ಪಿಸಿರಬಹುದೇ?

ಪುನಃ ಕಾಹಿಲೆ

ಗಾಂಧಿ-ಇರ್ವಿನ್‌ ಒಪ್ಪಂದವಾದ ಮೇಲೆ ಮಹಾತ್ಮ ಗಾಂಧಿ ಅಖಿಲ ಭಾರತ ಕಾಂಗ್ರೆಸ್ಸಿನ ಏಕಮಾತ್ರ ಪ್ರತಿನಿಧಿಯಾಗಿ ದುಂಡುಮೇಜಿನ ಪರಿಷತ್ತಿಗೆ ಲಂಡನ್ನಿಗೆ ಪ್ರಯಾಣಮಾಡಿದರು. ಚಕ್ರಗೋಷ್ಠಿ ನಾಟಕ ಲಂಡನ್ನಿನಲ್ಲಿ ಪ್ರದರ್ಶಿಸಲ್ಪಟ್ಟಿತು. ಗಾಂಧಿಜೀ ನಿರಾಶರಾಗಿ ಭಾರತಕ್ಕೆ ಬರಿಗೈಯಲ್ಲಿ

೨೩

ಪ್ರಯಾಣ ಮಾಡಿದರು. ಆವರು ಭಾರತಕ್ಕೆ ಬರುವಷ್ಟರಲ್ಲಿ ಭಾರತ ಸರ್ಕಾರ ಕರಾಳ ಶಾಸನಗಳನ್ನು ಪ್ರಯೋಗಿಸಿ ಮುಖಂಡರನ್ನೆ ಲ್ಲಾ ದಸ್ತಗಿರಿ ಮಾಡುತ್ತಿತ್ತು.

ಕಮಲಾನೆಹರು ಆಗ ಹಾಸಿಗೆ ಹಿಡಿದಿದ್ದರು. ಜವಹರಲಾಲರು ರಾಜಕೀಯದ ತುಂಬು ಕೆಲಸದಲ್ಲಿದ್ದರು. ಸಂಯುಕ್ತ ಪ್ರಾಂತ್ಯದಲ್ಲಿ ರೃತರ ಚಳುವಳಿ ಜೋರಿನಿಂದ ಸಾಗಿತ್ತು. ರೃತರೆಲ್ಲಾ ಎಚ್ಚೆ ತ್ತಿದ್ದರು. ಅಲಹಾ ಬಾದಿನ ರೈತ ಪರಿಷತ್ತನ್ನು ಮುಗಿಸಿಕೊಂಡು ಜನಹೆರಲಾಲರು ಕಮಲಾ ರವರನ್ನು ಕರೆದುಕೊಂಡು ಬೊಂಬಾಯಿಗೆ ಬಂದರು. ಅಲ್ಲಿ ಆಕೆಯ ಚಿಕಿತ್ಸೆಯ ಏರ್ಪಾಡು ಮಾಡಿ ಬಹಳ ದಿನಗಳಿಂದ ಕೊಟ್ಟಿದ್ದ ಮಾತನ್ನು

ಉಳಿಸಿಕೊಳ್ಳಲು ಕರ್ನಾಟಕದ ಪ್ರವಾಸ ಕೈಗೊಂಡರು.

ಸೇನಾಪತಿ ಡಾ| ಹರ್ಡೀಕರರು ಅಖಿಲ ಭಾರತಕ್ಕೆ ಹಿಂದೂಸ್ಥಾನಿ ಸೇವಾದಲದ ಮೂಲಕ ಮಾಡಿದ ಸೇವೆ ಅಮೋಫಿವಾದುದು. ಹಾಗೆಯೇ ಮರೆಯಲಾರದುದು. ಪಂಡಿತ ಜವಹರಲಾಲರು ಸಂಸ್ಥೆ ಯೆ ಅಗತ್ಯತೆ ಯನ್ನು ಕಂಡುಕೊಂಡು ಸೇವಾದಳವನ್ನು ಅಖಿಲ ಭಾರತ ಕಾಂಗ್ರೆಸ್ಸಿನ ಅಂಗಸಂಸ್ಥೆಯನ್ನಾಗಿ ಮಾಡಿದರು. ಡಾ| ಹರ್ಡೀಕರ್‌ ಮತ್ತು ಜವಹರ ಲಾಲರು ಇದರ ಸಂಚಾಲಕರಾಗಿದ್ದರು. ಸಂಸ್ಥೆ ಕೇಂದ್ರ ಕಜೇರಿ ಹುಬ್ಬಳ್ಳಿ ಯಲ್ಲಿತ್ತು. ಹರ್ಡೀಕರರ ಒತ್ತಾಯದಿಂದ ಪಂಡಿತರು ಕರ್ನಾಟಕ ಪ್ರವಾಸ ಹೊರಟದ್ದರು. ಕರ್ನಾಟಕದ ಜನ ಕೊಟ್ಟಿ ಸ್ವಾಗತ ನೆಹರು ಹಿಂದೆಂದೂ ಕಂಡಿರಲಿಲ್ಲ. ಸಂಯುಕ್ತ ಪ್ರಾಂತ್ಯದಲ್ಲಿ ಪ್ರಾರಂಭವಾಗಲಿರುವ ರೈತರ ಚಳುವಳ್ಳಿ ಕಮಲಾನೆಹರು ಖಾಹಿಲೆ ಜವಹರರನ್ನು ಬೇಗನೆ ಬೊಂಬಾಯಿಗೆ ಕರೆಸಿಕೊಂಡಿತು. ಗಾಂಧಿಜೀ ಲಂಡನ್ನಿನಿಂದ ಬರುವುದಕ್ಕೆ ದಿನಗಳು ಉಳಿದಿತ್ತು. ಸಂಯುಕ್ತ ಪ್ರಾಂತ್ಯದ ಸುದ್ದಿ ಪಂಡಿತರನ್ನು ರೇಗಿಸಿತ್ತು. ತನ್ನ ಪ್ರಾಂತ್ಯ ಕಷ್ಟದಲ್ಲಿರುವಾಗ ಅವರಲ್ಲಿ ಕೂಡಿಕೊಳ್ಳುವ ಆಸೆಯಿಂದ ಗಾಂಧಿಜೀ ಬರವಿಗಾಗಿ ಕಾಯದೆ ಅಲಹಾಬಾದಿಗೆ ತೆರಳಿದರು. ಹೋಗುವಾಗ ಸಂಗಾತಿ ಕಮಲಾನ್ನ ಖಾಹಿಲೆಯಲ್ಲಿ ಬಿಟ್ಟು, ಪುನಃ ಸ್ವತಂತ್ರ ರಾಗಿದ್ದ ಕೆ ದಿನಗಳ ಮೇಲೆ ಬೊಂಬಾಯಿಗೆ ಗಾಂಧಿಜೀ ಬಂದಾಗ ಕಾರ್ಯ

೨೪

ಸಮಿತಿಯಲ್ಲಿ ಬಂದು ಭಾಗವಹಿಸುವ ಸಮಯದಲ್ಲಿ ಬಂದು ಕಮಲಾರವರನ್ನು ನೋಡಬಹುದೆಂದು ತೀರ್ಮಾನಿಸಿ ಅಲಹಾಬಾದಿಗೆ ತೆರಳಿದರು.

ಅಲಹಾಬಾದಿಗೆ ಬಂದ ಕೂಡಲೇ ನಗರವನ್ನು ಬಿಟ್ಟು ಯೋಗ ಕೂಡದೆಂಬ ಆಜೆ ಯು ಜಾರಿಯಾಯಿತು... ಆಲಹಾಬಾದ್‌ ನಗರವನ್ನು ಬಿಟ್ಟು ಹೋಗಕೂಡದೆಂದು ಹಾಕಿದ್ದ ಪ್ರತಿಬಂಧಕಾಜ್ಞೆಯನ್ನು ಮುರಿದು ಜವಹೆರರು ಬೊಂಬಾಯಿಗೆ ಗಾಂಧಿಜೀಯನ್ನು, ಕಮಲಾರನ್ನು ನೋಡಲು ಪ್ರಯಾಣ ಬೆಳೆಸಿದರು. ಮಧ್ಯ ದಾರಿಯಲ್ಲಿ ನೆಹರುರವರನ್ನು ದಸ್ತಗಿರಿ ಮಾಡಲಾಯಿತು. ಇತ್ತ ಜವಹರರು ಪುನಃ ಸೆರೆಮನೆ ಸೇರಿದರು. ಅತ್ರ ಕಮಲಾನೆಹರು ಆಸ್ಪತ್ರೆ ಸೇರಿದರು. ಕಮಲಾಂವರನ್ನು ಜನಹರಲಾಲರು ನೋಡಲಾಗಲೇ ಇಲ್ಲ.

ಕಾಂಗ್ರೆಸ್‌ ಸಂಸ್ಥೆಯು ನ್ಯಾಯಬಾಹಿರವಾದ ಸಂಸ್ಥೆಯೆಂದು ಸಾರ ಲಾಯಿತು. ಕಾರ್ಯಸನಮಿತಿ, ಪ್ರಾಂತಸಮಿತಿ ಮತ್ತು ಇತರ ಕಾಂಗ್ರೆಸ್‌ ಸಂಸ್ಥೆ ಗಳು ಬಹಿಸ್ಕು ರಿಸಲ್ಪಟ್ಟವು. ರಾಷ್ಟ್ರೀಯ ನಾಬೆಗಳ್ಳು ಆಸ್ಪತ್ರೆಗಳು, ರೈತರ ಸಂಘಗಳು, ಯುವಕರ ಸಂಘಗಳು ರಾಷ್ಟ್ರಪ್ರೇಮದ ಅಪರಾಧಕ್ಕಾಗಿ ನ್ಯಾಯಬಾಹಿರವಾದುವು. ದಬ್ಬಾಳಿಕೆ ತನ್ನ ರಾಕ್ಷಸೀ ನಾಲಿಗೆಯನ್ನು ಚಾಚಿ ಎಲ್ಲಾ ಮುಖಗಳಲ್ಲಿಯೂ ಹರಡಿಕೊಂಡಿತು. ಲಕ್ಷಾಂತರ ಮಂದಿ ಸೆರೆಮನೆ ಸೇರಿದರು. ಸೆರೆಮನೆಗಳೆಲ್ಲ ಭರ್ತಿಯಾಗಿ ಬೇರೆ ಬೇರೆ ನಿವಾಸ ಗಳನ್ನು ಸೆರೆಮನೆಗಳಾಗಿ ಮಾರ್ಪಾಡು ಮಾಡಿದರು. ಚಳುವಳಿಯಲ್ಲಿ ಜವಹೆರರೆ ತಾಯಿ, ಸಹೋದರಿಯರು ಭಾಗ ತೆಗೆದುಕೊಂಡರು. ಕಮಲಾ ಹಾಸಿಗೆ ಹಿಡಿದಿದ್ದರಿಂದ ಭಾಗ ತೆಗೆದು ಕೊಳ್ಳ ಲಾಗಲಿಲ್ಲ. ಹಾಸಿಗೆಯಿಂದಲೇ ಅಲಹಾಬಾದಿನ ಘಟನೆಗಳನ್ನು ತಿಳಿದುಕೊಳ್ಳು ತ್ತಿದ್ದರು,

ಜವಹರರ ತಾಯಿ ಸ್ವರೂಪರಾಣಿಗೆ ವೃದ್ಧಾಪ್ಯದಲ್ಲಿ ಸೆರೆಮನೆಯ ವಾಸ ಹಿಡಿಸಲಿಲ್ಲ... ಓಂದು ವರ್ಷದ ಕಾರಾಗೃಹದ ಜೀವನವು ಅವರ ದೇಹಸ್ಥಿ ತಿಯನ್ನು ಕೆಡಿಸಿತು. ಆವರು ಖಾಹಿಲೆಯ ನಿಮಿತ್ತದಿಂದ ಬಿಡುಗಡೆ ಮಾಡಲ್ಪಟ್ಟಿರು. ನಂತರ ಚಿಕೆತ್ಸೆಯು ಲಕ್ನೋದಲ್ಲಿ ಪ್ರಾರಂಭವಾಯಿತು.

೨೫%

ಅಲ್ಲಿಯೂ ಗುಣಮುಖದ ಚಿಹ್ನೆಗಳು ಕಂಡುಬರಲಿಲ್ಲ. ಆದಕಾರಣ ಮಗ ಜನಹರರನ್ನು ೧೯೩೩ನೇ ಆಗಸ್ಟ್‌ ೩೦ನೇ ತಾರೀಖು ಬಿಡುಗಡೆಮಾಡಿದರು. ತಾಯ ಆಕ್ಲೆಕೆ ಮಾಡಲು ನೆಹರು ತಮ್ಮ ರಾಜಕೀಯ ಕೊಂಚ ಬದಿಗಿಟ್ಟು ಶ್ರಮಿಸಿದರು. ಕೃಷ್ಣಾ ರವರ ಮದುವೆಗೋಸ್ಟರ ಲಕ್ನೊ ( ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಗೆ ಬಂದರು. ಕಮಲಾ ತನ್ನ ಸ್ಪಂತ ಖಾಹಿಲೆಯನ್ನೂ ಲೆಕ್ಟಿಸದೆ, ಗಂಡನೊಂದಿಗೆ ಅತ್ತೆಯ ಆರೈಕೆ ಮಾಡುತ್ತಿದ್ದರು.

ಕಮಲಾರವರ ಮನಸ್ಸಿನ ದಾರ್ಥೈ ಬೆಳೆಯುತ್ತ ಹೋದಂತೆ ಅವರ ದೇಹದಾರ್ಡ್ಯ ಕುಗ್ಗುತ್ತಾ ಹೋಯಿತು. ತಮ್ಮ ನೋವನ್ನು ತಾವೇ ನುಂಗಿ ಕೊಳ್ಳುತ್ತಿದ್ದರೇ ವಿನಾ ಯಾರಿಗೂ ಆದರ ಅರಿವನ್ನುಂಟುಮಾಡುತ್ತಿರಲಿಲ್ಲ. ಆದ್ದರಿಂದ ಅವರ ದೇಹಸ್ಸಿತಿಯ ಕೆಡುವಿಕೆಯಲ್ಲಿ ಯಾರೂ ಅಷ್ಟಾಗಿ ಗಮನ ಕೊಡಲಿಲ್ಲ. ರಾಜಕೀಯ ಕೆಲಸದ ಮಧ್ಯೆ ಇರುವಾಗ ವೆ ದ್ಯರ ಸಲಹೆಯನ್ನು ಉಪೇಕ್ಷಿಸಿ, ತನ್ನ ಆರೋಗ್ಯದ ಕಡೆಗೆ ಗಮನವನ್ನೇ ಕೊಡದೆ, ಕೆಲಸದಲ್ಲಿ ಮಗ್ನರಾಗಿದ್ದರು.

ಜವಹರರ ಬಿಡುಗಡೆಯ ನಂತರ ಹೆಚ್ಚು ಕಾಲ ಅಲಹಾಬಾದಿನಲ್ಲಿಯೇ ಕಳೆದರು. ರಾಜಕೀಯದ ಜೊತೆಗೆ ಮನೆಯ ಸಂಸಾರದ ಭಾರವೂ ಅವರ ಮೇಲೆಯೇ ಬಿತ್ತು. ಖರ್ಚು ಹೆಚ್ಚಾಗಿ ದುಡಿಮೆಯು ಕಡಿಮೆಯಾಗಿತ್ತು. ಅದರೂ ತಾಯಿಯ ಕೊನೆಗಾಲದಲ್ಲಿ ಆಕೆಯ ಯಾನ ಸೌಲಭ್ಯಗಳನ್ನೂ ಕಡಿಮೆ ಮಾಡಲಿಲ್ಲ.

ಹಣಕಾಸಿನ ಪರಿಸ್ಥಿ ತಿಯನ್ನು ಹತೋಟಿಯಲ್ಲಿ ತರಲು ಜವಹರರು ತಮ್ಮ ಹೆಂಡತಿ ಕಮಲಾನೆಹರುರವರ ಒಡವೆಗಳನ್ನು ಮಾರುವುದಾಗಿ ನಿರ್ಧರಿಸಿದರು. ಕಮಲಾ ಆಭರಣಗಳನ್ನು ಮಾರಲು ಒಪ್ಪಲಿಲ್ಲ. ಆಕೆ ಆಭರಣಗಳನ್ನು ತೊಟ್ಟುಕೊಳ್ಳು ತ್ತಿರಲಿಲ್ಲವಾದರೂ, ತನ್ನ ಮಗಳು ಇಂದಿರೆಗೆ ಕೊಡಲು ಆಸೆ ಇಟ್ಟು ಕೊಂಡಿದ್ದರು.

ಜವಹೆರಲಾಲರಿಗೆ ಬಂಗಾಳದ ಕರೆ ಬಹಳ ದಿನಗಳಿಂದಲೂ ಇತ್ತು. ಸೆರೆಮನೆಯ ಕರೆಯೂ ಹೆತ್ತಿರ ಬಂದಂತೆ ತೋರುತ್ತಿತ್ತು. ಆದುದರಿಂದ

ಬಂಗಾಳಕ್ಕೆ ಹೋಗಿ ಜೊತೆಗೆ ಕಮಲಾರವನ್ನರ ದೇಹಪರೀಕ್ಷೆ ಕಲ್ಪತ್ತೆಯಲ್ಲಿ ಮಾಡಿಸಿ, ಚಿಕಿತ್ಸೆಯ ಏರ್ಪಾಡು ಮಾಡಲು ನಿರ್ಧರಿಸಿದರು” ಅಲಹಾ ಬಾದಿನಲ್ಲಿ ಸ್ವಾತಂತ್ರ್ಯದಿನಾಚರಣೆಯ ಹೊತ್ತಿಗೆ ಸರಿಯಾಗಿ ಬರಲು, ಕಮಲಾರವರ ಜೊತೆಗೆ"ಜನವರಿ ೧೫ನೇ ತಾರೀಖು ಕಲ್ಪತ್ತೆಗೆ ಪ್ರಯಾಣ ಮಾಡಿದರು.

ಸಂಜೆಯೇ ಬಿಹಾರೆದಲ್ಲಿ ಭೂಕಂಪವಾದದ್ದು. ಬಿಹಾರದ ದಕ್ಷಿಣ ಭಾಗದಲ್ಲಿ ಭೂಕಂಪವಾದ ಪ್ರದೇಶದಲ್ಲೇ ಇವರ ರೈಲುಗಾಡಿ ಓಡುತ್ತಿತ್ತು. ಕಲ್ಪತ್ತೆಗೆ ಬಂದ ತಕ್ಷಣವೇ ಕಮಲಾರವರನ್ನು ಅನೇಕ ವೈದ್ಯರು ಪರೀಕ್ಷೆ ಮಾಡಿದರು. ಒಂದು ತಿಂಗಳ ನಂತರ ಪುನಃ ಬದು ಚಿಕಿತ್ಸೆ ಪ್ರಾರಂಭ ಮಾಡಬೇಕೆಂದು ತೀರ್ಮಾನವಾಯಿತು. ಜವಹರರು ನಂತರ ಸ್ನೇಹಿತರು, ಫೆಲಸಗಾರೆರು ಮುಂತಾದ ಪ್ರಮುಖರನ್ನು ಭೇಟ ಮಾಡಿ ಕಲ್ಕತ್ತೆಯಲ್ಲಿ ಸಾರ್ವಜನಿಕ ಸಭಗಳಲ್ಲಿ ಭಾಷಣ ಮಾಡಿದರು.

ಶಾ೦ತಿನಿಕೇತನಕ್ಕೆ ಭೇಟ

ಕಮಲಾ ಮತ್ತು ಜವಹರರು, ಕಲ್ಪತ್ತೆ ಯಿಂದ ಶಾಂತಿನಿಕೇತನಕ್ಕೆ ಪ್ರಯಾಣ ಬೆಳೆಸಿದರು. ಕವಿವರ್ಯರಾದ ರವೀಂದ್ರನಾಥ ಬಾಗೂರರನ್ನು ನೋಡುವುದೂ ಮತ್ತು ತಮ್ಮ ಮಗಳು ಇಂದಿರೆಯ ಮುಂದಿನ ವಿದ್ಯಾಭ್ಯಾಸ ಅಲ್ಲಿಯೇ ಆಗಬೇಕಿತ್ತಾದ್ದರಿಂದ ಸ್ಥಳ ನೋಡಿಕೊಂಡು ಹೋಗುವುದೂ ಅವರ ಭೇಟಿಯ ಉದ್ದೇಶವಾಗಿತ್ತು. ಇಂದಿರೆಯನ್ನು ಶಾಂತಿನಿಕೇತನಸ್ವೆ ಕಳುಹಿಸಲು ನಿರ್ಧರಿಸಿ, ಬಿಹಾರದ ಮಾರ್ಗವಾಗಿ ಪ್ರಯಾಣ ಬೆಳೆಯಿಸಿ ಸಾಟ್ಸಾ ನಗರದಲ್ಲಿ ಬಾಬು ರಾಜೇಂದ್ರ ಪ್ರಸಾದರನ್ನು ನೋಡಲು ಅಲ್ಲಿ ಇಳಿದರು. ರಾಜೇಂದ್ರ ಬಾಬುವನ್ನು ಸರ್ಕಾರ ಆಗತಾನೇ ಭೂಕಂಪದ ಸರಿಹಾರಕ್ಕೋಸ್ಕರ ಬಿಡುಗಡೆ ಮಾಡಿತ್ತು; ಕಮಲಾ ತಮ್ಮ ಅಣ್ಣನ

ಎತ್ತಿ

ಮನೆಯಲ್ಲಿ ತಂಗಲು ಹೋದಾಗ ಮನೆ ಸಂಪೂರ್ಣವಾಗಿ ನೆಲಸಮವಾಗಿ ಭೂಕಂಪಕ್ಕೆ ಆಹುತಿಯಾಗಿತ್ತು.

ಕಮಲಾ ಮತ್ತು ಜವಹೆರರು ಫೆಬ್ರುವರಿ ೧೧ಕ್ಕೆ ಅಲಹಾಬಾದಿಗೆ ಬಂದರು. ಹತ್ತು ದಿನಗಳ ಪ್ರವಾಸ ತುಂಬಾ ಶ್ರಮದಾಯಕವಾಗಿತ್ತು. ಮರುದಿನ ಮಧ್ಯಾಹ್ನ ಕಮಲಾ, ಜವಹರಲಾಲ್‌, ಪುರುಷೋತ್ತಮದಾಸ್‌ ತಾಂಡನ್‌ ಮಾತನಾಡುತ್ತ ಕುಳಿತಿದ್ದರು. ಪೋಲೀಸರ ಕಾರೊಂದು ಮನೆಗೆ ಬಂದಿತು. ಕಲ್ಪತ್ರೆ ಯಲ್ಲಿ ಭಾಷಣ ಮಾಡಿದುದು ರಾಜದ್ರೋಹನವೆಂದು ಪರಿಗಣಿಸಿ ಅಲ್ಲಿಂದ ಬಂದಿತ್ತು ದಸ್ತಗಿರಿ ವಾರಂಟ್‌. ನೆಹರು, "ಇದಕ್ಕಾಗಿ ಬಹಳ ದಿನಗಳಿಂದ ಕಾಯುತ್ತಿದ್ದೆ' ಎಂದು ಹಾಸ್ಯ ಮಾಡುತ್ತ ಸೆರೆಮನೆಗೆ ಹೋಗುವ ಸಿದ್ದ ತೆಯಲ್ಲಿ ತೊಡಗಿದ್ದರು. ಕಮಲಾ ಜವಹೆರರ ಬಟ್ಟೆ ಬರೆ ಸಿದ್ಧ ಮಾಡಲು ತಮ್ಮ ಕೊಠಡಿಗೆ ಹೋದರು. ಜವಹರರು ಆಕೆಯನ್ನು ಒಂಬಾಲಿಸಿದರು. ತೇಜಸ್ತಿಯಾವ ಜವಹೆರರನ್ನು ಕಾಂತಿಯುಕ್ತವಾದ ಕಣ್ಣು ಗಳಿಂದ ನೋಡಿದರು ಕಮಲಾ. ಕ್ಷಣದಲ್ಲಿಯೇ ಜವಹರಲಾಲರ ಕೊರಳನ್ನು ಹಿಡಿದುಕೊಂಡು ಬಿಗಿದಪ್ಪಿದರು; ಮೂರ್ಛೆಹೊಂದಿ ಕೆಳಗೆ ಬಿದ್ದರು. ಜವಹರರು ಸೆರೆಮನೆಗೆ ಹೋಗುವುದು ಅದೇ ಮೊದಲನೇ ಸಾರೆ ಅಲ್ಲದಿದ್ದರೂ ಕಮಲಾರವರ ಹೃದಯದ ಹಂಬಲ ಕೊನೆಯದಾಯಿತು. ಆದೇ ಕೊನೆಯ ಸಾರಿಯ ಆತ್ಮೀಯತೆಯ ಭೇಟಿಯಾಯಿತು. ಕಮಲಾ ಮತ್ತು ಜವಹರರು ಆಗತಾನೇ ಹತ್ತಿರಕ್ಕೆ ಬಂದಿದ್ದರು; ಒಬ್ಬರನ್ನೊಬ್ಬರು ಅರಿತುಕೊಂಡಿದ್ದ ರು; ಆಗ ಒಬರಿಗೊಬರು ಬೇಕಾಗಿದ್ದರು. ಖಾಹಿಲೆಯೆ ಸಮಯದಲ್ಲಂತೂ, ತನ್ನ ನರೆಂಬುವರು ಇರಲೇಬೇಕು... ಸಮಯದಲ್ಲಿ ವಿಧಿಯು ಅವರಿಬ್ಬರನ್ನೂ ಬೇರೆಮಾಡಿತು.

ಜವಹರರ ವಿಚಾರಣೆ ಕಲ್ಕತ್ತೆಯಲ್ಲಾಗಿ ಎರಡು ವರ್ಷ ಕಠಿಣ ಶಿಕ್ಷ ವಿಧಿಸಲ್ಪಟ್ಟತು. ಆಲಿಪುರ ಮತ್ತು ಡೆಹರಾಡೂನ್‌ ಸೆರೆಮನೆ ಪಂಡಿತರ ನೆಲೆವೀಡಾಯಿತು. ಪಂಡಿತರು ಡೆಹರಾಡೂನ್‌ ತುರಂಗದಲ್ಲಿರುವಾಗ ಕಮಲಾನೆಹರು ತೀವ್ರ ಖಾಹಿಲೆಯಲ್ಲಿ ಹಾಸಿಗೆ ಹಿಡಿದಿದ್ದರು. ಕಮಲಾರವರ ಪಕ್ಕದಲ್ಲಿ ನೆಹರು ಆಗ ಬೇಕಿತ್ತು. ಆದರೆ ಕಾರಾಗೃಹದ ಬಾಗಿಲು ನೆಹರು

ವಿಲಿ

ರವರನ್ನು ಬಂಧಿಸಿತ್ತು. ೧೯೩೪ನೇ ಜುಲೈ ತಿಂಗಳ ಕೊನೆಗೆ ಕಮಲಾ ನೆಹರುರವರ ಸ್ಥಿತಿ ಭಯಂಕರವಾಯಿತು. ಸ್ವಲ್ಪವೇ ದಿನಗಳಲ್ಲಿ ವಿಷಮ ಸ್ಥ ತಿಗೇರಿತು. ಆಗಸ್ಟ್‌ ೧೧ನೇ ತಾರೀಖು ಜವಹರರನ್ನು ಡೆಹರಾಡೂನ್‌ ಸೆರೆಮನೆಯಿಂದ ಅಲಹಾಬಾದಿಗೆ ಕರೆತಂದು ಅಲ್ಲಿ ತಾತ್ಕಾಲಿಕ ಬಿಡುಗಡೆ ಮಾಡಲಾಯಿತು. ಜವಹರರ ಬಿಡುಗಡೆ ಕಮಲಾರವರಿಗೆ ಹರ್ಷವನ್ನು ಉಂಟುಮಾಡಿತು. ಇಂದಿರೆಯೊ ಕೂಡ ಶಾಂತಿನಿಕೇತನದಿಂದ ತಾಯಿಯ ಬಳಿಯಲ್ಲಿರಲು ಬಂದಿದ್ದಳು.

ಜನಹರರ ಅನುತಾಪ

ಜವಹೆರರು ತಮ್ಮ ಆತ್ಮಕಥೆಯಲ್ಲಿ ಕಮಲಾರವರನ್ನು ನೋಡಿದಾಗ ಆಗಿನ ತಮ್ಮ ಮನಸ್ಸನ್ನು ಹೃದಯಂಗಮವಾಗಿ ಚಿತ್ರಿಸಿದ್ದಾರೆ. “ಅಲ್ಲಿ ಅವಳು ಕೃಶಳಾಗಿ, ಒಣಗಿ ಮಲಗಿದ್ದಳು. ಅವಳು ತನ್ನ ಮೊದಲಿನ ಛಾಯೆ ಮಾತ್ರ ಆಗಿದ್ದಳು. ಶಕ್ತಿಗುಂದಿದವಳಾದರೂ ಖಾಹಿಲೆಯ ಎದರು ಧೈರ್ಯದಿಂದ ಹೋರಾಡುತ್ತಿದ್ದಳು. ನನ್ನನ್ನು ಅವಳು ಅಗಲಿ ಹೋಗುವಳು ಎಂಬ ಯೋಚನೆಯು ಬಂದಾಗ ಮನಸ್ಸು ಕದಡಿಹೋಗುತ್ತಿತ್ತು. ನಮ್ಮ ಮದುವೆಯಾಗಿ ಹದಿನೆಂಟು ವರ್ಷವಾಗಿ ಹೋಯಿತು. ನನ್ನ ಮನಸ್ಸು ಅಂದಿನ ದಿನದ ನೆನಪು ಮಾಡಿಕೊಂಡಿತು. ಅಂದಿನಿಂದ ಇಂದಿನ ವರೆಗೆ ನಡೆದ ಘೆಟನಾವಳಿಗಳನ್ನು ಜ್ಞಾ, ಪಕಕ್ಕೆ ತಂದುಕೊಂಡೆ. ನನಗಾಗ ೨೬ ವರ್ಷ; ಅವಳಿಗೆ ಕೇವಲ ೧೭ ವರ್ಷ. ಪ್ರಪಂಚದ ಜೀವನ ತಿಳಿಯದ ನೈಜಸ್ವಭಾವವುಳ್ಳ ಕೇವಲ ಹುಡುಗಿಯಾಗಿದ್ದಳು... ನನಗೂ ಆಕೆಗೂ ಒಂಭತ್ತು ವರ್ಷದ ಅಂತರವಿತ್ತು. ಅದಕ್ಕಿಂತ ಹೆಚ್ಚಾಗಿ ನಮ್ಮ ಮನಸ್ಸಿನ ಬೆಳವಣಿಗೆಯ ಮಟ್ಟದ ಅಂತರ ಜಾಸ್ತಿ ಇತ್ತು. ಅವಳಿಗಿಂತ ನನ್ನ ಮನಸ್ಸು ಬೆಳೆದಿತ್ತು. ಪ್ರಾಪಂಚಿಕ ಜೀವನದ ಅನುಭವವಿದ್ದಂತೆ ಕಂಡ ನಾನು ತೀರ ಹುಡುಗನಂತೆ ವರ್ತಿಸುತ್ತಿದ್ದೆ. ಮೊಗ್ಗು ಅರಳಿದಂತೆ ಅರಳುತ್ತಿರುವ

ಸೂಕ್ಷ್ಮ ಹುಡುಗಿಯ ಮನಸ್ಸನ್ನು ಅರಿತುಕೊಳ್ಳಲು ತಯಾರ್ಮಾಡಲು, ವಿನಯದಿಂದ ಕೂಡಿದ ಮೃದುವಾದ ತರಬೇತು ಅವಶ್ಯಕವೆಂದು ನನಗೆ ಆಗ ತಿಳಿದಿರಲಿಲ್ಲ. ನಾನು ಅವಳು ಒಬ್ಬರಿಗೊಬ್ಬರು ಆಕರ್ಷಿತರಾಗಿದ್ದೆವು; ನಾವು ಚೆನ್ನಾಗಿಯೇ ಬಾಳಿದೆವು. ಆದರೆ ನಮ್ಮ ಹಿನ್ನೆಲೆ ಬೇರೆಬೇರೆ ಇದ್ದುದರಿಂದ ನಮ್ಮಲ್ಲಿ ಹೊಂದಿಕೆ ಆಷ್ಟಿರಲಿಲ್ಲ. ಹೊಂದಿಕೆ ಇಲ್ಲದಿದ್ದುದು ಆಗಾಗ ನಮ್ಮಲ್ಲಿ ಜಗಳವನ್ನು ತಂದೊಡ್ಡಿತು, ಹುಡುಗಾಟಿಕೆಯ ಜಗಳ ಬಹಳ ದಿನಗಳಿರುತ್ತಿದ್ದಿಲ್ಲ; ಬಹು ಜಾಗ್ರತೆ ಒಪ್ಪಂದದಲ್ಲಿ ಪರಿಣಾಮಗೊಳ್ಳು ತ್ತಿತ್ತು. ಇಬ್ಬರಿಗೂ ಶೀಘ್ರವಾಗಿ ಕೋಪ ಬರುತ್ತಿತ್ತು. ನಮ್ಮ ಹುಡುಗತನದ ಗೌರವ ಕಾಪಾಡಿ ಕೊಳ್ಳಲು ಇದ್ದ ಬುದ್ದಿ, ನವಿರಾದ ಸ್ಪಭಾವ ಕೋಪಕ್ಕೆಡೆಮಾಡಿ ಕೊಡುತ್ತಿತ್ತು. ಇದರ ಮಧ್ಯೆ ನಮ್ಮ ಆತ್ಮೀಯತೆ ಬೆಳೆಯಿತು. ನಮ್ಮ ಮದುಯಾಗಿ ೨೧ ತಿಂಗಳ ನಂತರ, ನಮ್ಮ ಒಬ್ಬಳೇ ಮಗಳು ಇಂದಿರಾ ಹುಟ್ಟಿದಳು.

ನಮ್ಮ ಮಮವೆಯ ಸಂದರ್ಭದಲ್ಲಿಯೇ ರಾಜಕೀಯದಲ್ಲಿ ಹೊಸ ಬೆಳವಣಿಗೆಯು ಪ್ರಾರಂಭವಾಗಿತ್ತು. ರಾಜಕೀಯದಲ್ಲಿ ನನ್ನ ಭಾಗವೂ ಬೆಳೆಯುತ್ತಾ ಹೋಯಿತು. ಹೋಂ ರೂಲ್‌ ದಿನಗಳು, ಮಾರ್ಹಿಯಲ್‌ ಲಾ ದಿನಗಳು, ಅಸಹಕಾರದ ದಿನಗಳು ಒಂದಾದಮೇಲೊಂದರಂತೆ ಬರಲು ಆರಂಭಿಸಿದುವು. ಅವೆಲ್ಲವುಗಳಲ್ಲಿಯೂ ನಾನು ಭಾಗವಹಿಸಿದೆ. ರಾಜ ಕೀಯದ ಬಿರುಗಾಳಿಯಲ್ಲಿ ಸಿಕ್ಕಿ ಸಂಪೂರ್ಣವಾಗಿ ನಾನು ಅವಳನ್ನು ಮರೆತೆನು. ಅಷ್ಟೇ ಅಲ್ಲ, ಅವಳನ್ನು ಏಕಾಂಗಿಯಾಗಿ ತನ್ನ ಕಾಲ ಮೇಲೆ ತಾನು ನಿಲ್ಲಬೇಕಾದ ಪರಿಸ್ಥಿತಿಯನ್ನು ಒದಗಿಸಿದೆನು. ಯಾವಾಗ ಅವಳಿಗೆ ನನ್ನ ಸಂಪೂರ್ಣ ಸಹಕಾರವು ಬೇಕಿತ್ತೋ ಸಮಯ ನಾನು ಅವಳನ್ನು ಮರೆತಿದ್ದೆ ನು... ಆದರೂ ನನ್ನ ಪ್ರೀತಿ ಹೆಚ್ಚಾಗಿ ಬೆಳೆಯಿತು ಬಲಿಯಿತು; ನನ್ನನ್ನು ಸಂತ್ರೈಸಲು ಅವಳು ಯಾವಾಗಲೂ ತನ್ನ ಹೆದಯವನ್ನೇ ಮಾಸಲಾ ಗಿಟ್ಟಿದ್ದಳು. ಅವಳೇನೋ ನನಗೆ ಶಕ್ತಿಯನ್ನು ಕೊಡುತ್ತಿದ್ದಳು. ಆದರೆ ತನ್ನನ್ನು ಮರೆತೆನೆಂದು ಅವಳು ನೊಂದಿರಬೇಕು. ಅವಳೊಂದಿಗೆ ಸಂಪೂರ್ಡ ನಿರ್ದಯತೆಯಿಂದಿರುವುದು, ಇಂತಹೆ ಅರ್ಧಂಬರ್ಧವಾದ ನಡವಳಿಕೆಗಿಂತ ಚೆನ್ನಾಗಿತ್ತೋ ಏನೋ!

೩೦

« ನಂತರ ಅವಳಿಗೆ ಖಾಹಿಖೆ; ನನಗೆ ಸೆರೆಮನೆ ವಾಸ. ನಮ್ಮ ಭೇಟಿ ಮಾಡಲು ಅನುಮತಿಯಿತ್ತಾಗ ಮಾತ್ರ. ಅಸಹಕಾರ ಚಳುವಳಿ ಅವಳನ್ನು ಹೋರಾಟದ ರಣರಂಗದಲ್ಲಿ ತಂದಿತು. ಅವಳು ನನ್ನಂತೆ ಸೆರೆಮನೆಗೆ ಹೋದಾಗ ಎಷ್ಟು ಸಂತೋಷಸಟ್ಟಳೋ! ನಾವು ಆಗ ಇನ್ನೂ ಹತ್ತಿರ ಹತ್ತಿರ ಬಂದೆವು. ಅನಿರೀಕ್ಷಿತವಾಗಿ ಆಗುತ್ತಿದ್ದ ನಮ ಭೇಟಿಗಳು ಬಹಳ ಬೆಲೆಯುಳ್ಳದ್ದಾಗುತ್ತಿದ್ದುವು. ಭೇಟಿಯ ದಿನಕ್ಟಾಗಿ ನಾವು ಎದುರು ನೋಡುತ್ತಿದ್ದೆವು. ನಮ್ಮ ಭೇಟಿಯಲ್ಲಿ ಏನಾದರೊಂದು ಹೊಸದು ಇರುತ್ತಿ ದ್ಹುದರಿಂದ ನಮಗೆ ಬೇಸರವೇ ಆಗುತ್ತಿರಲಿಲ್ಲ. ನಮ್ಮಿಬ್ಬರಲ್ಲಿ ಒಬ್ಬರಿ ಗೊಬ್ಬರು ಹೊಸದನ್ನು ಕಂಡುಹಿಡಿಯುತ್ತಿದ್ದೆವು. ಕೆಲವು ಸಲ ಹೊಸದು ಇಬ್ಬರಿಗೂ ನಮ್ಮದೇ ಆದ ರೀತಿಯಲ್ಲಿ ಹಿಡಿಸುತ್ತಿತ್ತು. ನಾವು ಬೆಳೆದು ದೊಡ್ಡವರಾದರೂ, ನಮ್ಮ ಮತಭೇದಗಳು ಹುಡುಗಾಟಕೆಯಂತಿದ್ದುವು.

ಹದಿನೆಂಟು ವರ್ಷಗಳು ನಮ್ಮ ಸಂಸಾರ ಸಾಗಿದ್ದರೂ ಆಕೆ ಹುಡುಗಿ ಯಂತೆ ಇನ್ನೂ ಮದುವಣಿಗಿತ್ತಿಯಂತೆಯೇ ಇದ್ದಳು. ಮದುವೆಯಾದಂತೆ ಕಾಣುತ್ತಲೇ ಇರಲಿಲ್ಲ. ಬಹಳ ದಿನಗಳ ಹಿಂದೆ ನಮ್ಮ ಮನೆಗೆ ಕನ್ಯೆಯಾಗಿ ಬಂದಂತೆಯೇ ಇದ್ದಳು. ಆದರೆ ನಾನು ಮಾತ್ರ ಬದಲಾಯಿಸಿದ್ದೆ. ನನ್ನ ವಯಸ್ಸಿಗೆ ನಾನು ಚುರುಕಾಗಿ, ಚಟುವಟಕೆಯಿಂದ ಇದ್ದರೂ ಇನ್ನೂ ಹುಡುಗುತನದ ಚಹರೆ ಇದ್ದವೆಂದು ಅನೇಕರು ಹೇಳುತ್ತಿದ್ದರೂ ನನ್ನ ಲಕ್ಷಣಗಳು ನನ್ನ ವಯಸ್ಸನ್ನು ಹೇಳುತ್ತಿದ್ದುವು. ನನ್ನ ತಲೆಯು ಅರ್ಧ ಬೋಳಾಗಿತ್ತು. ನನ್ನ ಕೂದಲು ಬೆಳ್ಳಗಾಗಿತ್ತು. ಗೆರೆಗಳು ಮತ್ತು ಸುಕ್ಳುಗಳು ನನ್ನ ಮುಖದ ಮೇಲೆ ಬಾಣುತ್ತಿದ್ದುವು. ನನ್ನ ಕಣ್ಣಿನ ಸುತ್ತ ಕಪ್ಪುಛಾಯೆ ಆವರಿಸಿಕೊಂಡಂತಿತ್ತು. ಕಳೆದ ನಾಲ್ಕು ವರ್ಷಗಳ ಕಷ್ಟಗಳು ಮತ್ತು ದುಃಖಗಳು ನನ್ನ ಮನಸ್ಸಿನ ಮೇಲೆ, ದೇಹದ ಮೇಲೆ ಪರಿಣಾಮ ಮಾಡಿದ್ದುವು. ಅನೇಕ ಸಲ ದಿನಗಳಲ್ಲಿ ನಾನೂ ಕಮಲಾ ಹೊರಗೆ ಹೋದಾಗ ಅವಳನ್ನು ನನ್ನ ಮಗಳೆಂದು ತಿಳಿದುಕೊಳ್ಳು ತ್ತಿದ್ದರು. ಅವಳು ಮತ್ತು ಇಂದಿರಾ ಅಕ್ಕೃತಂಗಿಯರಂತೆ ಕಾಣುತ್ತಿದ್ದರು.

ಹದಿನೆಂಟು ವರ್ಷಗಳ ನಮ್ಮ ಸಂಸಾರ! ಆದರೆ ಅವಧಿಯಲ್ಲಿ ಎಷ್ಟು ವರ್ಷ ನಾನು ಸೆರೆಮನೆಯಲ್ಲಿ ಕಮಲಾ ಆಸ್ಪತ್ರೆ ಮತ್ತು ಆರೋಗ್ಯ

೩ಗಿ

ಧಾಮಗಳೆಲ್ಲಿ ಕಳೆದಿರಲಿಲ್ಲ! ಆದರೊ ಈಗ ನಾನು ಸೆರೆಮನೆಯ ವಾಸ ಅನುಭವಿಸುತ್ತಿದ್ದೆ. ಆಕೆ! ಜೀವನದ ಹೋರಾಟ ನಡೆಸುತ್ತ ಖಾಹಿಲೆಯಲ್ಲಿ ಬಿದ್ದಿದ್ದಳು. ಅವಳ ಆರೋಗ್ಯದ ವಿಷಯದಲ್ಲಿ ಅವಳ ನಿರ್ಲಕ್ಷೆಯನ್ನು ನೋಡಿ ನನಗೆ ಸ್ಪಲ್ಪ ರೇಗಿತು... ಆದರೂ ನಾನು ಅವಳನ್ನು ಹೇಗೆ ದೂರಲಿ? ರಾಷ್ಟ್ರದ ಹೋರಾಟದಲ್ಲಿ ತನ್ನ ಸಂಪೂರ್ಣ ಸೇವೆ ಸಲ್ಲಿಸಲು ಆವಳ ಖಾಹಿಲೆ ತಡೆ ಬಂತು. ಅವಳ ಆಸೆ ಸ್ಫೂರ್ತಿ ದಿನದಿನಕ್ಕೆ ಕರಗಿ ಹೋಗುತ್ತಿದ್ದುವು. ದೇಹಾರೋಗ್ಯವಿಲ್ಲದೆ ಯಾವುದನ್ನೂ ಮಾಡಲು ಅವಳಿಗೆ ಸಾಧ್ಯವಿರಲಿಲ್ಲ... ಕಡೆ ಕೆಲಸವೂ ಸಾಗುತ್ತಿರಲಿಲ್ಲ. ಕಡೆ ಆರೈಕೆಗೆ ಮನಸ್ಸೂ ಇರುತ್ತಿರಲಿಲ್ಲ. ಅವಳಲ್ಲಿದ್ದ ಜ್ಯೋತಿ ದಿನದಿನಕ್ಕೆ ಅವಳ ದೇಹವನ್ನು ಕುಗ್ಗಿಸುತ್ತ ಬಂದಿತು.

ನನಗವಳು ತುಂಬಾ ಬೇಕಾಗಿದ್ದಾ ನನ ನ್ನು ಅವಳೆಂದಿಗೂ ಬಿಡಳು. ನಾವೀಗ ಇಬ್ಬರೂ ಒಬ್ಬರನ್ನೊಬ್ಬ ರು ಅರಿತುಕೊಳ್ಳಲು ಪ್ರಾರಂಭ ಮಾಡಿಲ್ಲವೇನು? ನಮ್ಮ ಜೀವನ ಈಗ ಪ್ರಾರಂಭವಾಗಿದೆ. ನಮ ನಮ್ಮ ಲ್ಲ ಇಬರೂ ಬಹಳವಾಗಿ ನೂಬಿಕೊಂಡಿಡ್ದೆ ವ್ರ. ನಾವಿಬ್ಬರೂ ತೊಟ ಮಾಡಬೇಕಾದದ್ದು ಬಹಳವಿತ್ತು.

ಜನಹರರ ಬಿಡುಗಡೆ

ರೀತಿ ಸಾಗಿತ್ತು ಜವಹರರ ಮನಸ್ಸು . ಪ್ರ ತ್ಯುಕ್ಷವಾಗಿ ರಾಜಕೀಯ ದಲ್ಲಿ ಕೃಹಾಕಲು ಜವಹೆರರು ಮನಸ ಸ್ಪುಮಾಡಲಿ್ಲ್ಲ. ಕಮಲಾರವರೆ ದೇಹ ಸ್ಥಿ ತಿಯ ನಿಷಯವಾಗಿ ಗಾಂಧಿಜೀಗೆ ತಗದ ಬರೆದರು. ಸರ್ಕಾರ ನಿರ್ದಿಷ್ಟ ನಾಗಿ ಬಿಡುಗಡೆ ಮಾಡಿರಲಿಲ್ಲವಾದ್ದರಿಂದ, ಅವರನ್ನು ಎಂದು ಸೆರೆಮನೆಗೆ ಕರೆದುಕೊಂಡು ಹೋಗುತ್ತಾ ರೋ ತಿಳಿದಿರಲಿಲ್ಲ. ಜವಹರರು ಬಂದಮೇಲೆ ಕಮಲಾರವರ ದೇಹೆಸ್ಸಿ ತಿಯು ಸ್ವಲ್ಪಸ್ವಲ್ಪವಾಗಿ ಗುಣಮುಖವಾಗುತ್ತಾ

ಶ್ರಿ

ಬಂದಿತು. ಸರ್ಕಾರಕ್ಕೆ ಕಮಲಾನೆಹರುರವರ ದೇಹಸ್ಥಿ ತಿಯ ವಿಚಾರವಾಗಿ ಪ್ರತಿದಿನವೂ ಸುದ್ದಿ ಹೋಗುತ್ತಿತ್ತು. ಅವರು ಸ್ವಲ್ಪ ಗುಣಮುಖರಾಗುತ್ತ ಇದ್ದಾರೆಂದು ತಿಳಿದ ಕೂಡಲೇ ಪುನಃ ಜವಹರರನ್ನು ಹನ್ನೊಂದು ದಿನಗಳ ನಂತರ ಆಗಸ್ಟ್‌ ೨೪ರಲ್ಲಿ ನೈಸಿ ಸೆರೆಮನೆಗೆ ಕರೆದೊಯ್ದರು. ಮುಪ್ಪಿನ ತಾಯಿ ಹಾಸಿಗೆಯಿಂದ ಎದ್ದು ಜವಹರರನ್ನು ಅಪ್ಪಿಕೊಂಡು ಬೀಳ್ಕೊಟ್ಟರು. ದೃಶ್ಯ ಮನಕರಗುವಂಥಹುದಾಗಿತ್ತು.

ಜವಹರಲಾಲರ ದಸ್ತಗಿರಿ ಕಮಲಾನೆಹರುರವರ ಮೇಲೆ ತುಂಬಾ ಕೆಟ್ಟ ಪರಿಣಾಮ ಮಾಡಿತು. ಅಗಲಿಕೆಯ ದುಃಖ ಇಮ್ಮಡಿಸಿತು. ಜವಹರ ಲಾಲರಿಗೆ ಸ್ವಲ್ಪ ದಿನಗಳ ಮಟ್ಟಿಗೆ ದಿನವೂ ನೈದ್ಯರ ವರದಿಯನ್ನು ತಂದು ಒಪ್ಪಿಸುತ್ತಿದ್ದರು. ಕೊನೆಗೆ ಕಮಲಾರವರ ದೇಹಸ್ಥಿತಿ ವಿಪರೀತ ಕೆಡುತ್ತ ಬಂದಂತೆ ವರದಿಗಳನ್ನೂ ನಿಲ್ಲಿಸಿಬಿಟ್ಟರು. ಪಂಡಿತರ ಹೃದಯದ ನೋವು ಬಲವಾಯಿತು. ಕಮಲಾರವರ ಜೊತೆಯಲ್ಲಿರಬೇಕೆಂಬ ಆಸೆ ತೀವ್ರವಾಯ್ತು. ಬೊಂಬಾಯಿ ಕಾಂಗ್ರೆಸ್‌ ಅಧಿವೇಶನ, ಬಾಬು ರಾಜೇಂದ್ರ ಪ್ರಸಾದರ ಅಧ್ಯಕ್ಷತೆಯಲ್ಲಿ ನಡೆಯುವುದಿತ್ತು. ಹೊತ್ತಿಗೆ ನೆಹರುರವರನ್ನು ಬಿಡುಗಡೆ ಮಾಡುತ್ತಾರೆಂದು ನಂಬಲಾಯಿತು. ಆದು ಬರೀ ನಂಬಿಕೆಯೇ ಆಯಿತು. ದಸ್ತಗಿರಿಯಯದ ಒಂದು ತಿಂಗಳ ನಂತರ ಕಮಲಾರವರನ್ನು ನೋಡಲು ಜವಹರರನ್ನು ಕರೆದುಕೊಂಡು ಹೋದರು. ವಾರಕ್ಕೆರಡು ಸಲ ಹೀಗೆಯೇ ಕರೆದುಕೊಂಡು ಹೋಗಬಹುದೆಂದು ತಿಳಿಸಿದ್ದರು. ಆದರೆ ಮೇಲೆ ಹಾಗೆ ಮಾಡಲೇ ಇಲ್ಲ. ಇದ್ದಕ್ಕಿದ್ದ ಹಾಗೆ ಆಕೆಯ ದೇಹಸ್ಥಿತಿ ನಿಷಮಾವಸ್ಥೆಗೆ ಬಂದಿತು. ಸೆಪ್ಟೆಂಬರ್‌ ತಿಂಗಳು ಕಳೆಯಿತು. ಮೂವತ್ತು ದಿನಗಳು ಪಂಡಿತರು ಅತಿ ಕಷ್ಟದಲ್ಲಿ ಮನಸ್ಸಿನ ಹೊಯ್ದಾ ಟದಲ್ಲಿ ಕಳೆದರು. ಹೀಗೆ ಹಿಂದೆಂದೂ ಅನರು ಕಷ್ಟಪಟ್ಟಿ ರಲಿಲ್ಲ.

ಪಂಡಿತ ಜವಹರಲಾಲರು ರಾಜಕೀಯದಲ್ಲಿ ಭಾಗವಹಿಸುವುದಿಲ್ಲ ವೆಂದು ಸರ್ಕಾರಕ್ಕೆ ಬಾಯಿಯಲ್ಲಿ ಮಾತು ಕೊಟ್ಟರೆ ಸಾಕು, ಸರ್ಕಾರವು ಅವರನ್ನು ಬಿಡಲು ತಯಾರಾಗಿತ್ತು. ಸರ್ಕಾರ ಸ್ನೇಹಿತರೆ ಮುಖಾಂತರ ಹಾಗೆ ಹೇಳಿಯೂ ಹೇಳಿಸಿತು. ಪಂಡಿತರಿಗೆ ಸಮಯದಲ್ಲಿ ರಾಜಕೀಯ

೩3

ಜೀಡವಾಗಿತ್ತೀನೋ ನಿಜ. ಆದರೆ ಸರ್ಕಾರಕ್ಕೆ ಆರೀತಿ ಮಾತು ಕೊಟ್ಟು ಬಿಡುಗಡೆಯಾಗುವ ಜೀವವೇ ಆದು! ಅವರ ಪ್ರತಿಜ್ಞೆಗಳು, ಆವರು ಹೋರಾಡುತ್ತಿದ್ದ ಪವಿತ್ರವಾದ ಕೆಲಸ್ಕ ಅವರ ಗೆಳೆಯರು ಮತ್ತು ತಮಗೆ ಎರಡು ಬಗೆದುಕೊಳ್ಳಲು ಸಾಧ್ಯವೇ? ಯಾವುದನ್ನು ಇಲ್ಲಿಯ ವರೆಗೆ ಪವಿತ್ರವೆಂದು ಪರಿಗಣಿಸುತ್ತಿದರೋ ಅದಕ್ಕೆಲ್ಲ ಸಾವಿನ ಪೆಟ್ಟು ಕೊಟ್ಟಂತೆ ಆಗುತ್ತಿತ್ತು. ಕಮಲಾರವರ ದೇಹಸ್ಥಿತಿ ಬರಬರುತ್ತ ವಿಷಮಾವಸ್ಥೆಗೆ ಏರಿ ಜವಹರಲಾಲರು ಪಕ್ಳೆದಲ್ಲಿದ್ದರೆ ಸಾವಿನ ದವಡೆಯಿಂದ ಪಾರಾಗಬಹುದೆಂಬ ಒಂದು ದೂರದ ಆಸೆಯು ಇತ್ತು. ಆತ್ಮಗೌರವನೈೆ ಧಸ್ಟ್‌ ತಂದುಕೊಂಡು ಆಕೆ ಬದುಕುವ ಆಸೆಗೆ ಅವಕಾಶ ಕಲ್ಪಿಸಲು ಅವರ ಸ್ನಂತ ಪ್ರತಿಷ್ಠೆ ಅಡ್ಡ ಬಂತೋ ಏನೋ! ಆದರೆ ಸಂದರ್ಭ ಪಂಡಿತರಿಗೆ ಬರಲಿಲ್ಲ. ಕಮಲಾ ವರ್ತನೆಯನ್ನು ಎಂದೂ ಸಹಿಸುತ್ತಿರಲಿಲ್ಲ... ಹಾಗೇನಾದರೂ ಪಂಡಿತರು ಸರ್ಕಾರಕ್ಕೆ ಮಾತು ಕೊಟ್ಟಿದ್ದರೆ ಆಕೆಗೆ ಬಲವಾದ ಪೆಟ್ಟು ಬೀಳುತ್ತಿತ್ತು. ರಾಸ್ಟ್ರಸೇನಿಕೆಯಲ್ಲವೇ ಆಕೆ! ಸ್ವತಂತ್ರ 3ಕ್ರೋಸ್ಪರ ಹೋರಾಡಿದುದರ ಫಲವಾಗಿ ತಾನೇ, ಹೀಗೆ ಆಕೆ ನರಳುತ್ತಿದ್ದುದು.

ಅಕ್ಟೋಬರ್‌ ತಿಂಗಳಿನಲ್ಲಿ ಪುನಃ ಕಮಲಾರವರನ್ನು ನೋಡಲು ಪಂಡಿತರನ್ನು ಕರೆದೊಯ್ದರು. ಭಯೆಂಕರ ಜ್ವರ ಬಂದು ಧಗೆಯಲ್ಲಿ ಆಕೆ ಮಲಗಿದ್ದರು. ಜವಹರಲಾಲರು ಆಗ ಆಕೆಯ ಪಕ್ಕದಲ್ಲಿರಬೇಕೆಂದು ಅವರ ಮನಸ್ಸಿತ್ತು. ಸೆರೆಮನೆಗೆ ಹೋಗುವ ಅವಧಿ ಸಮಾಪಿಸಿದಾಗ ಕಮಲಾ ಜವಹರರನ್ನು ಪಕ್ಕದಲ್ಲಿ ಕೈಸನ್ನೆ ಮಾಡಿ ಕರೆದು ಕನಿಮಾತು ಹೇಳಿದರು.

ಮಾತಿನಲ್ಲಿ ಥೈರ್ಯವಿತ್ತು, ಗಾಂಜೀರ್ಯನಿತ್ತು, ನಿರ್ಧಾರವಿತ್ತು. ಸ್ವಾತಂತ್ರ್ಯದ ಕೆಚ್ಚಿತ್ತು. ನಗುತ್ತಾ ಹೇಳಿದರು: ನೀವು ಸರ್ಕಾರಕ್ಕೆ ಕ್ರಮಾಸಣೆಯನ್ನು ಬರೆದುಕೊಟ್ಟು ಹೊರಗೆ ಬರಬೇಕೆಂದು ಮಾಡಿದ್ದಿ (ರಂತೆ, ನಿಜನೇನು? ಹಾಗೇನಾದರೂ ಮಾಡೀರಾ! ಖಂಡಿತ ಮಾಡಬೇಡಿ. ಕಮಲಾರವರಿಗೆ ಸ್ವಲ್ಪ ಗುಣಮುಖನಾದ ಕೂಡಲೆ ಯಾವುದಾದ ರೊಂದು ಗುಡ್ಡಗಾಡಿನಲ್ಲಿರುವ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗ ಬೇಕೆಂದು ನಿರ್ಧರಿಸಲಾಗಿತ್ತು. ಆದರೆ ಆಕೆಗೆ ಗುಣಮುಖ ಕಂಡುಬರಲೇ ಇಲ್ಲ; ಮತ್ತಷ್ಟು ಇಳಿಮುಖವಾಯಿತು. ಅದೇ ಸಿತಿಯಲ್ಲಿಯೇ ಅವರನ್ನು

ಘ್‌

ಡಿ೪

ಭೋವಾಲಿ ಎಂಬ ಗುಡ್ಡಗಾಡಿನ ಆರೋಗ್ಯಕೇಂದ್ರಕ್ಕೆ ಕರೆದುಕೊಂಡು ಹೋದರು. ಅದಕ್ಕೆ ಹಿಂದಿನ ದಿನ ಕಮಲಾರವರನ್ನು ನೋಡಲು ಪಂಡಿತ ರನ್ನು ಕರೆದುಕೊಂಡು ಹೋಗಿದ್ದ ರು. ಸಂಡಿತರು ಕಮಲಾರವರನ್ನು ಬೀಳ್ಳೊಟ್ಟಿರು. ಅವರ ಮನಸ್ಸಿನಲ್ಲಿ ಆಗ ಅನೇಕ ಭಾವನೆಗಳು ಬಂದುವು. ಕಮಲಾರವರನ್ನು ಪುನಃ ನೋಡಲಾದೀತೇ? ಅಥವಾ ಆದೇ ಕೊನೆಯ ಭೇಟಯೋ ಏನೋ ಎಂಬ ಸಂಶಯದ ಪರದೆ ಅವರ ಮೇಲೆ ಬಿದ್ದಿತು.

ಮೂರು ವಾರೆಗಳ ನಂತರ ಪಂಡಿತರನ್ನು ಕಮಲಾರ ಹತ್ತಿರದಲ್ಲಿರಲು ನ್ಸೈನಿ ಸೆರೆಮನೆಯಿಂದ ಆಲ್ಮೋರಾಕ್ಸೆ ವರ್ಗಾಯಿಸಿದರು. ದಾರಿಯಲ್ಲಿ ಭೋವಾಲಿಯಲ್ಲಿಳಿದು ಕಮಲಾರವರನ್ನು ನೋಡಿಕೊಂಡು ಹೋದರು. ಅಲ್ಲಿಯ ಹವಾ ಆಕೆಗೆ ಸ್ವಲ್ಪ ಗುಣ ಕೊಟ್ಟಿತ್ತು. ಆದರೆ ಕೆಲವು ದಿನಗಳ ಮೇಲೆ ಪುನಃ ರೋಗ ಉಲ್ಬಣವಾಯಿತು. ಪಂಡಿತರು ಆಲ್ಮೋರಾದಲ್ಲಿ ಮೂರುವರೆ ತಿಂಗಳ ಅವಧಿಯಲ್ಲಿ ಸಲ ಆಕೆಯನ್ನು ಭೇಟ ಮಾಡಿದ್ದರು. ಆದರೂ ಬ್ರಿಟಿಷ್‌ ಸರಕಾರ, ವಾರಕ್ಕೆರಡು ಸಲ ಆಕೆಯನ್ನು ನೋಡಲು ಸಂಡಿತರಿಗೆ ಅವಕಾಶ ಕೊಡಲಾಗುತ್ತಿದೆ ಎಂದು ಹೇಳಿತ್ತು. ಭೇಟಗಳು ಆಕೆಗೆ ಸಂತೃಪ್ತಿಯನ್ನು ಂಟಮಾಡುತ್ತಿದ್ದುವು. ಪಂಡಿತರಿಗೆ ಆಕೆಯನ್ನು ಬಿಟ್ಟು ಹೋಗಲು ಮನಸ್ಸೇ ಇರುತ್ತಿರಲಿಲ್ಲ. ಇವರಿಬ್ಬರಿಗೂ ತಾತ್ಕಾಲಿಕ ಅಗಲಿಕೆ ಬಹಳ ಹಿಂಸೆ ಕೊಡುತ್ತಿತ್ತು. ಮಧ್ಯೆ ಒಂದು ದಿನ ಇದ್ದಕ್ಕೈದ್ದ ಹಾಗೆಯೇ, ಜವಹರರ ತಾಯಿಗೆ ಪಾರ್ಶ್ವವಾಯು ಹಿಡಿದು ಹಾಸಿಗೆಯನ್ನು ಹಿಡಿದಿದ್ದಾರೆಂದು ಸುದ್ದಿ ಬಂತು. ಪಂಡಿತರನ್ನು ತಾಯಿಯ ಹತ್ತಿರ ಬೊಂಬಾಯಿಗೆ ಕಳುಹಿಸಬೇಕೆಂದು ನಿರ್ಧರಿಸಿತ್ತು ಸರ್ಕಾರ. ಆದರೆ ಸ್ವರೂಪರಾಣಿಗೆ ಗುಣವಾಗುತ್ತ ಬಂದಿತು. ಆದ್ದರಿಂದ ಜವಹರಲಾಲರನ್ನು ಆಲ್ಮೋರಾ ಸೆರೆಮನೆಯಿಂದ ಬದಲಾಯಿಸಲಿಲ್ಲ.

ಯುರೋಪಿಗೆ ಕಮಲಾ

೧೯೩೫ನೇ ಮೇ ತಿಂಗಳಲ್ಲಿ ಕಮಲಾ ಚಿಕಿತ್ಸೆಗಾಗಿ ಯುರೋಪಿಗೆ ತೆರಳಿದರು. ಸೆಪ್ಟಂಬರ್‌ ನಾಲ್ಕನೇ ತಾರೀಖು ಪಂಡಿತ ಜವಹರಲಾಲರನ್ನು

೩೨%

ಅವರ ಹೆಂಡತಿಯ ಖಾಹಿಶೆಯ ನಿಮಿತ್ತ ಬಿಡುಗಡೆಮಾಡಿದರು. ಜರ್ಮನಿಯ "ಬ್ಲಾಕ್‌ ಫಾರೆಸ್ಸಿ'ನ ಆರೋಗ್ಯಧಾಮವಾದ "ಬೇರ್ಡವೇಲರ್‌'ನಲ್ಲಿ ಕಮಲಾ ಚಿಕಿತ್ಸೆಸಡೆದುಕೊಳ್ಳು ತ್ತಿದ್ದರು. ಜವಹರರ ೫1 ತಿಂಗಳ ಶಿಕ್ಷೆಯನ್ನು ವಜಾ ಮಾಡಿ ಅವರನ್ನು ಬಿಡುಗಡೆ ಮಾಡಿದರು. ಆಲ್ಮೋರಾದಿಂದ ಅಲಹಾ ಬಾದಿಗೆ ಬಂದು ಮರುದಿನವೇ ಕರಾಚಿ, ಬಾಗ್ದಾದ್‌, ಕೈರೋ ಮುಖಾಂತರ ವಿಮಾನದಲ್ಲಿ ತೆರಳಿದರು. ಅಲೆಕ್ಸಾಂಡ್ರಿಯಾದಲ್ಲಿ ಸಮುದ್ರನಿಮಾನವನ್ನು ಹೆತ್ತಿ ಬ್ರಿಂಡ್ಸಿಗೆ ಬಂದು ಆಲ್ಲಿಂದ ರೈಲಿನಲ್ಲಿ ಸ್ರಿಟ್ಟರ್ಲೆಂಡಿಗೆ ಹೋದರು. ಬಿಡುಗಡೆಯಾದ ಐದು ದಿನಗಳ ನಂತರ, ಆಲಹಾಬಾದ್‌ ಬಿಟ್ಟು ನಾಲ್ಕು ದಿನಗಳಾದ ಮೇಲ್ಮೆ ಸೆಪ್ಟಂಬರ್‌ ಒಂಭತ್ತನೇ ತಾರೀಖು ಬೇರ್ಡವೇಲರನ್ನು ತಲ್ಲಿದರು.

ಕಮಲಾರವರ ಮುಖದ ಮೇಲೆ ಆದೇ ಧ್ಲರ್ಯದ ನಗೆಯು ಇತ್ತು. ಬಾಧೆಯಿಂದ ನರಳುತ್ತಿದ್ದು ತುಂಬಾ ಅಶಕ್ತರಾಗಿದ್ದರು. ಜವಹರರ ಬರವು, ಅವರನ್ನು ಸ್ವಲ್ಪ ಉತ್ತಮಸ್ಥಿತಿಗೆ ತಂದಿತು. ಆದರೆ ಸಂದಿಗ್ಧ ಕಾಲ ಮಾತ್ರ ಇನ್ನೂ ಕಳೆದಿರಲಿಲ್ಲ. ಕಮಲಾ ಸಾಯುವಳೆಂಬ ಯೋಚನೆಯನ್ನು ತಾರಲು ಮಸ್ಸು ಬಾರದೆ, ಕಡೆ ವಿಷ ಘಳಿಗೆಯು ಕಳೆದರೆ ಉಸ್ತಮ ವಾಗುವುದೆಂದು ಜವಹರರು ಭಾವಿಸುತ್ತಿದ್ದರು. ವೈದ್ಯರು ಆಗಾಗ್ಯೆ ಪುನಃ ಪುನಃ ಆಸೆ ಕೊಡುತ್ತಿದ್ದರು. ಒಂದು ಕುತ್ತ ಕಳೆಯಿತು. ಸಂಭಾಷಣೆಗೆ ಆಕೆ ನಿಶ್ಶಕ್ತಳಾಗಿದ್ದರು. ನೆಹರು ಆಗಾಗ್ಗೆ ಮಾತನಾಡಿಸುತ್ತಿದ್ದರು. ಆಕೆಗೆ ಆಯಾಸವಾದಂತೆ ಕಂಡಾಗ ನಿಲ್ಲಿಸುತ್ತಿದ್ದರು. ಆಗಾಗ್ಗೆ ಪುಸ್ತಕ ಓದುತ್ತಿದ್ದರು. ಅವುಗಳ ಪೈಕಿ ಸರ್ಲ್‌ ಬಕ್‌ರ "ದಿ ಗುಡ್‌ ಅರ್ಥ್‌? ಎನ್ನುವ

ಹಾ

ಪುಸ್ತಕ ಓದಿದಾಗ ಆಕೆ ತುಂಬಾ ಆಸಕ್ತಿ ತೋರಿಸಿದರು.

ಆಣವ

ಬೆಳಗಿನಿಂದ ಸಾಯಂಕಾಲದ ವರೆಗೆ ಜನಹಂರಿಗೆ ಇದೇ ಕಲಸ. ಹಳ್ಳಿಯ ಚಿಕ್ಕ ಮನೆಯಿಂದ ಆರೋಗ್ಯಧಾಮಕ್ಕೆ ಓಡಾಡಬೇಕಿತ್ತು. ಜವಹರರಿಗೆ ಅನೇಕ ವಿಷಯಗಳನ್ನು ಕಮಲಾರವರಿಗೆ ಹೇಳಬೇಕೆಂದು ಆಸೆ. ಹಳ್ಳಿಯ ನೆನಪುಗಳು, ಭಾರತದ ಗೆಳೆಯರು, ಮುಂದಿನ ಭವಿಷ್ಯ ಇವೇ ಅವರ ಮಾತಿನ ನಿಷಯಗಳಾಗಿತ್ತು. ಕಮಲಾರವರ ಕಣ್ಣುಗಳ ಕಾಂತಿ?

ನಗುಮುಖ, ಆಕೆಯನ್ನು ನೋಡಲು ಬಂದ ಜನರಿಗೆ ಆಶ ಶ್ರರ್ಯವನ್ನುಂಟು

ಮಾಡಿ ಆಕ ಬದುಕುವ ಆಸೆ ಸೆಯನ್ನಿ ಟ್ರುಕೆ ರೊಳ್ಳು ತಿ ತ್ತಿದ್ದ ರು.

ಬೇರ್ಡವೇಲರ್‌ದಲ್ಲಿ ಕಮಲಾಗೆ ಕೊಂಚ ಉತ್ತಮನಾಯಿತು. ನಿಷ ಘಳಿಗೆ ಕಳೆದಿತ್ತು. ಜವಹೆರೆರು ಇದೇ ಸಮಯದಲ್ಲಿ ಇಂದಿರೆಯೊಂದಿಗೆ ಲಂರ್ಡಗೆ ಹೋಗಿ ಬಂದರು. ಬೇರ್ಡವೇಲರ್‌ನಲ್ಲಿ ಚಳಿಗಾಲ ಪ್ರಾರಂಭಿಸಿತು. ಕಮಲಾರ ದೇಹಸ್ಥಿತಿ ಇಳಿಮುಖ ತೋರಿಸಿತು. ಕ್ರಿಸ್‌ಮಸ್‌ ಹೊತ್ತಿಗೆ ಪುನಃ ಇನ್ನೊ ದು ಗಂಡಾಂತರ ಬಂದಿತು. ಸಲ ಆಕೆಯ ಜೀವ ಒಂದು ದಾರದಿಂದ 'ಓಿಡಿದುಕೊಂಡಿದೆಯೆಂಬಂತೆ ಭಾಸವಾಗುತ್ತಿತ್ತು... ಕಮಲಾ

ಗಂಡಾಂತರವನ್ನು ಧೈರ್ಯದಿಂದ ಎದುರಿಸಿ ಸಾವನ್ನು ಗೆದ್ದರು.

ಬೇರ್ಡವೇಲರ್‌ ಕಮಲಾರವಂಗೆ ಬೇಸರ ತಂದಿತ್ತು. ಅಲ್ಲಿಂದ ಬೇರೆಯ ಕಡೆ ಬದಲಾಯಿಸಲು ಆಸೆ ತೋರಿಸಿದರು. ಆಕೆ ಅಲ್ಲಿಂದ ಬಿಡಲು ಬೇರೆ ಇನ್ನೊಂದು ಕಾರಣವೂ ಇತ್ತು. ಅದೇ ಆರೋಗ್ಯಧಾಮದಲ್ಲಿ ಒಬ್ಬ ರೋಗಿ ತೀರಿಕೊಂಡ ಸುದ್ದಿ ಆಕೆಯ ಕಿವಿಗೆ ಬಿದ್ದಿತ್ತು. ರೋಗಿ ಆಕೆಗೆ ಆಗಾಗ್ಗೆ ಹೂವುಗಳನ್ನು ಕಳುಹಿಸುತ್ತಿದ್ದ. ಅನೇಕ ಸಲ ಆಕೆಯನ್ನು ಬೇಟ ಕೂಡಾ ಮಾಡಿದ್ದೆ. ರೋಗಿ ಐತ್ಸಂಡಿನವನು. ಕಮಲಾರವರಿಗಿಂತ ಉತ್ತಮನಿತ್ತು ಅವನ ಆರೋಗ್ಯ. ಹವಾಸೇವನೆಗೆ ಹೋಗಲು ಅವನಿಗೆ ಅನುಮತಿ ಸಹಾ ಇತ್ತು. ಸಾವಿನ ಸುದ್ದಿ ಕಮಲಾರವರಿಗೆ ತಿಳಿಯ ಬಾರದೆಂದು ಪ್ರಯತ್ನಪಟ್ಟಿದ್ದು ಸಾಧ್ಯವಾಗಲಿಲ್ಲ. ಈತನ ಸಾವಿಗೆ ಕಮಲಾ ತುಂಬ ನೊಂದುಕೊಂಡಿ ರು.

೧೯೩೬ನೇ ಜನವರಿಯಲ್ಲಿ ಪಂಡಿತರು ಪ್ಯಾರಿಸ್‌ ಮತ್ತು ಲಂಡನ್‌ ನಗರಗಳಿಗೆ ಭೇಟಿಕೊಟ್ಟರು. ಆವರು ಅಖಿಲ ಭಾರತ ಕಾಂಗ್ರೆಸ್ಸಿನ ರಾಷ್ಟ್ರಾಧ್ಯಕ್ಷರಾಗಿ ೨ನೇ ಸಲ ಚುನಾಯಿತರಾದರೆಂಬ ಸುದ್ದಿ ಲಂಡನ್ನಿನಲ್ಲಿ ತಿಳಿಯಿತು. rd ಅಧಿವೇಶನ ಏಪ್ರಿಲ್‌ ತಿಂಗಳಿನಲ್ಲಿ ಸೇರುವುದೆಂದು ಪಂಡಿತರಿಗೆ ಮೊದಲೇ ಸೆ ಸ್ನೇಹಿತರು ತಿಳಿಸಿದ್ದ ರಿಂದ ಕಮಲಾರವರ ಸಂಗಡ ಚರ್ಚಿಸಿದ್ದರು. ಕಮಲಾರವರನ್ನು ಅಂತಹ ? ಸ್ಥಿತಿಯಲ್ಲಿ ಬಿಟ್ಟು ಭಾರತಕ್ಕೆ ಹೊರಡುವುದೇ ಅಥವಾ ಕಾಂಗ್ರೆಸ್‌ "ಅಧ್ಯಕ್ಷತೆಗೆ 'ರಾಜೀನಾನೆ ಡುವುದೇ

ಎಂಬ ಸಮಸ್ಯೆ ಬಗೆಹರಿಯಲಾರದಾಗಿತ್ತು. ಜವಹರರು ರಾಜೀನಾಮೆ ಉತ ಒಡಂಬಡೆಲಿಲ್ಲ. ಭಾರತಕ್ಕೆ ಹೋಗಿ ಎರಡು ತಿಂಗಳಲ್ಲಿ ಪುನ ಸು ಬರುವ ಯೋಚನೆ ಮಾಡಿ ಜನವರಿ ತಿಂಗಳಿನಲ್ಲಿ ಧಾಮಕ್ಕೆ ತೆರಳಿದರು. |

ಸ್ವಿಟ್ಟರ್ಲೆಂಡಿಗೆ ಬದಲಾಯಿಸಿದ್ದು ಅಹ್ಲಾ ದಕರವಾ ಗಿತ್ತು. ಆದರೂ ಕಮಲಾರನರೆ ದೇಹಸ್ಸಿ ತಿ ನಿಧಾನವಾಗಿ ಉತ್ತ ಮಗೊಳ್ಳುತ್ತ ನಡೆದಿತ್ತು. ಏರೂ ಇರಲಿಲ್ಲ; ಇಳಿಮುಖವೂ ಇರಲಿಲ್ಲ. ಏತನ್ನ ದ್ಯ ಭಾರತದ ಸೆ ಸ್ನೇಹಿತರು ಸಂಡಿತರನ್ನು ಭಾರತಕ್ಕೆ ಬರುವಂತೆ ಒತ್ತಾಯಿಸುತ್ತಿ ದ್ದ ರು. ೫851 ಜೊತೆಗೆ ನಿಷಯ ಚರ್ಚಿಸಿ, ಕೊನೆಗೆ ವೈದ್ಯರ ಅಭಿಪ್ರಾ ಯದ ಮೇಲೆ ಹೆ. ಎಲ್‌. ಎಂ. ಡಚ್‌ ವಿಮಾನದ ಮೂಲಕ ಭಾರತಕ್ಕೆ, ಹೊರಡಲು ಫೆಬ್ರುವರಿ ೨೮ನೇ ತಾರೀಖನ್ನು ಗೊತ್ತುಮಾಡಿದರು. ಇದೆಲ್ಲ ವ್ಯವಸ್ಥೆ ಸೆಗಳ ಕಮಲಾ, ಜವಹರರ ಬಾಜ ಪ್ರಯಾಣವನ್ನು ಇಚಿ